
ಕಾರ್ಕಳ, ಡಿ.10: ಗಣಪತಿ ವಿಗ್ರಹ ತಯಾರಕರಾಗಿರುವ ಎಣ್ಣೆಹೊಳೆಯ ಗಣೇಶ್ ನಾಯಕ್ ಯಾನೆ ಪ್ರೇಮಾನಂದ ನಾಯಕ್ ಅವರ ಧರ್ಮಪತ್ನಿ ಮಮತಾ ನಾಯಕ್ (56) ಅವರು ಮಂಗಳವಾರ ರಾತ್ರಿ ಹಠಾತ್ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದು ನಿಧನರಾಗಿದ್ದಾರೆ.
ಮಂಗಳವಾರ ಎಂದಿನಂತೆ ಊಟ ಮುಗಿಸಿದ ಮಮತಾ ನಾಯಕ್ ಅವರು 11 ಗಂಟೆಗೆ ಮೊಬೈಲ್ ನೋಡಿ ಬಳಿಕ ನಿದ್ದೆ ಮಾಡಲು ಸಿದ್ಧತೆ ಮಾಡಿಕೊಳ್ಳುವಾಗ ಹಠಾತ್ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡು ನಿಧನರಾಗಿದ್ದಾರೆ.
ಮಮತಾ ನಾಯಕ್ ಅವರು ಪತಿ ,ಪುತ್ರ ಗೌತಮ್ ನಾಯಕ್ ,ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ಅವರ ಅಕಾಲಿಕ ಸಾವು ಕುಟುಂಬ ವರ್ಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
.
.
