ಉಡುಪಿ ನಗರದಲ್ಲಿ ನಡು ರಸ್ತೆಯಲ್ಲಿ ಮದ್ಯೆರಾತ್ರಿ ನಡೆದ ಗ್ಯಾಂಗ್ ವಾರ್ ನಡೆದ ವಿಡಿಯೋ ವೈರಲ್ ಅಗಿದೆ.ಮೇ 18 ರಂದು ಉಡುಪಿಯ ಕುಂಜಿಬೆಟ್ಟು ಬಳಿ ಎರಡು ತಂಡಗಳ ಮಧ್ಯೆ ತಲವಾರು ಹಿಡಿದು ಹೊಡೆದಾಟ ನಡೆಸಿರುವ ವಿಡಿಯೋ ವನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದರು.ಇದೀಗ ಅ ವಿಡಿಯೋ ವೈರಲ್ ಅಗಿದೆ. ವಿಡಿಯೋ ವೈರಲ್ ಅಗುತ್ತಿದ್ದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಉಳಿದ ಅರೋಪಿಗಳಿಗಾಗಿ ಶೋಧ ಕಾರ್ಯ ಅರಂಭಿಸಿದ್ದಾರೆ.
ಕಾಪು ಮೂಲದ ಗರುಡ ಗ್ಯಾಂಗ್ ನ ಆಶಿಕ್ ಮತ್ತು ರಾಕೀಬ್ ಬಂಧಿತರು, ಆಶಿಕ್ ಕಾಪು ಮೂಲದವನಾಗಿದ್ದು ರಾಕೀಬ್ ಗುಜ್ಜರಬೆಟ್ಟು ನಿವಾಸಿಯಾಗಿದ್ದಾನೆ.ಪ್ರಕರಣದಲ್ಲಿ ಬಳಸಲಾದ ಎರಡು ಕಾರು, ಬೈಕ್ , ತಲವಾರು ಮತ್ತು ಡ್ಯಾಗರ್ ವಶಕ್ಕೆ ಪಡೆಯಲಾಗಿದೆ. ವಿಡಿಯೋ ದೃಶ್ಯಾವಳಿ ಆಧರಿಸಿ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಹಿಂದೆ ಗಾಂಜಾ ವಾಸನೆ ಬರುತ್ತಿದ್ದು ಪೊಲೀಸರು ಕಠಿಣ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ