ಕಾರ್ಕಳ: ಇಂದಿನ ಸಮಾಜದಲ್ಲಿ ಜನರು ಸುಶಿಕ್ಷಿತರಾಗುತ್ತಿದ್ದಂತೆ ತಿಳುವಳಿಕೆಯ ಮಟ್ಟ ಮಾತ್ರ ದಿನೇದಿನೇ ಕುಸಿಯುತ್ತಿದೆ ಎನ್ನುವುದು ಅಷ್ಟೇ ಸತ್ಯ. ಇದಕ್ಕೆ ಉತ್ತಮ ಉದಾಹರಣೆ ಎಂಬAತೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯತಿಯವರು ಕಸ ಹಾಕದಂತೆ ಬೋರ್ಡ್ ಹಾಕಿದ್ರೂ ಜನರು ಪಕ್ಕದಲ್ಲಿರುವ ನೀರು ಪೂರೈಕೆಯ ಗೇಟ್ ವಾಲ್ವ್ ಚೇಂಬರ್ ನೊಳಗೆ ಕಸ ಹಾಕುವ ಮೂಲಕ ಸಣ್ಣತನ ಪ್ರದರ್ಶಿಸುತ್ತಿದ್ದಾರೆ.
ಅಜೆಕಾರು ಪಂಚಾಯಿತಿ ಕಚೇರಿಯ ಬಳಿಯ ಕೊಂಬಗುಡ್ಡೆ ಎಂಬಲ್ಲಿನ ತಿರುವಿನಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿದ್ದ ಹಿನ್ನಲೆಯಲ್ಲಿ ಪಂಚಾಯಿತಿ ಆಡಳಿತವು ಕಸ ಹಾಕದಂತೆ ಎಚ್ಚರಿಕೆ ಫಲಕ ಹಾಕಿತ್ತು. ಆದರೆ ವಿಪರ್ಯಾಸವೆಂದರೆ ಕಸ ಹಾಕಬೇಡಿ ಎನ್ನುವ ಬೋರ್ಡಿನ ಪಕ್ಕದಲ್ಲೇ ಕಸದ ತೊಟ್ಟಿಯಂತೆ ನೀರು ಸರಬರಾಜು ಪೈಪ್ಲೈನ್ ಗೇಟ್ ವಾಲ್ವ್ ಗೆ ಸಿಮೆಂಟ್ ಚೇಂಬರ್ ನಿರ್ಮಿಸಿ ಇದಕ್ಕೆ ಗೇಟ್ ವಾಲ್ವ್ ಎಂದು ಬರೆಯಲಾಗಿದೆ ಆದರೆ ಸಾರ್ವಜನಿಕರು ಇದನ್ನು ಓದುವ ಗೋಜಿಗೂ ಹೋಗದೇ ನೀರು ಪೂರೈಕೆಯ ಗೇಟ್ ವಾಲ್ವ್ ಚೇಂಬರಿನೊಳಗೆ ಹಾಕುತ್ತಿದ್ದು ಇದರಿಂದ ಕಸ ಎಸೆಯುವವರ ಕೊಳಕು ಮನಸ್ಥಿತಿಯ ಅನಾವರಣವಾಗಿದೆ. ಕೇವಲ ಕಸ ಮಾತ್ರವಲ್ಲದೇ ಮದ್ಯದ ಬಾಟಲಿಗಳನ್ನು ಕೂಡ ಗೇಟ್ ವಾಲ್ವ್ ಚೇಂಬರಿನೊಳಗೆ ಎಸೆಯಲಾಗಿದೆ. ಮರ್ಣೆ ಪಂಚಾಯಿತಿ ಆಡಳಿತವು ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ
ಸ್ವಚ್ಚತೆ ಹಾಗೂ ಪರಿಸರ ರಕ್ಷಣೆ ನಮ್ಮೆಲ್ಲರ ಮಹತ್ತರ ಹೊಣೆಗಾರಿಕೆಯಾಗಿದೆ. ಆದರೆ ಇಂತಹ ಮಹತ್ವದ ವಿಚಾರಗಳಲ್ಲಿ ನಾವು ಸಣ್ಣತನ ತೋರುತ್ತಿರುವುದು ನಮ್ಮ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ. ಕೇವಲ ನಮ್ಮ ಮನೆ ಸ್ವಚ್ಚವಾಗಿದ್ದರೆ ಸಾಕು ಅಕ್ಕಪಕ್ಕದ ಮನೆ ಅಥವಾ ಪರಿಸರ ಹಾಳಾದರೆ ನಮಗೇನು ಎನ್ನುವ ಬುದ್ದಿಯನ್ನು ಬಿಟ್ಟು ಕಂಡಕAಡಲ್ಲಿ ಕಸ ಹಾಕದೇ ಪಂಚಾಯಿತಿಯ ಕಸ ಸಂಗ್ರಗಣೆಯ ವಾಹನಕ್ಕೆ ಕಸ ನೀಡಿ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ.