ಕಾರ್ಕಳ: ಮಾತಾಮರಿಯ ಮಹಾಸಂಘ/ ಸ್ತ್ರೀ ಸಂಘಟನೆ, ಕಣಜಾರು ಇವರ ಆಶ್ರಯದಲ್ಲಿ “ಲಿಂಗ ಸಮನತಾ” ತರಬೇತಿ ಕಾರ್ಯಕ್ರಮ ಜುಲೈ 8 ರಂದು ಕಣಜಾರು ಸೌಹಾರ್ದಭವನದಲ್ಲಿ ಜರುಗಿತು. ಸಂಪಲ್ಮೂಲ ವ್ಯಕ್ತಿಯಾಗಿ ಉಡುಪಿ ಸಂಪದ ಸಂಸ್ಥೆಯ ಸಂಯೊಜಕರಾದ ಸ್ಟ್ಯಾನ್ಲಿ ಪೆರ್ನಾಂಡಿಸ್ ಭಾಗವಹಿಸಿದ್ದರು.
ಕಣಜಾರು ಲೂರ್ಡ್ಸ್ ಮಾತೆ ದೇವಲಯದ ಧರ್ಮ ಗುರುಗಳಾದ ರೆ| ಪಾ| ಹೆರಾಲ್ಡ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಚೇತನ ಪುರುಷರ ಮಹಾಸಂಘದ ಅದ್ಯಕ್ಷ ಸಂದೀಪ್ ಕಸ್ತಲೀನೋ. ಪ್ರಿಯಾ ಕ್ವಾಡ್ರಾಸ್ (ಕಾರ್ಯಕರ್ತೆ ಸಂಪದ), ಆ್ಯಂಟನಿ ಮಿರಾಂದಾ ಹಾಗೂ ಪ್ರಿಯಾ ಡಿಸೊಜಾ (ಲಿಂಗ ಸಮನತಾ ಪ್ರೆರಣ ತಂಡ, ಉಡುಪಿ) ಪಾಲನಾ ಮಂಡಳಿಯ ಪದಾಧಿಕಾರಿಗಳಾದ ಸ್ಟಾನಿ ಸಲ್ಡಾಹ್ನಾ, ಅನಿತಾ ಕ್ವಾಡ್ರಸ್, ಮೇಬಲ್ ನಜ್ರೆತ್, ಮಹಾಸಂಘದ ಕಾರ್ಯದರ್ಶಿ ಟ್ರೇಸಿ ಮಿರಾಂದಾ ಉಪಸ್ಥಿತರಿದ್ದರು.
ಸಂಘದ ಅದ್ಯಕ್ಷೆ ವಿಲ್ಮಾ ಮಿರಾಂದಾ ಸ್ವಾಗತಿಸಿ, ಆನಿತಾ ನಜ್ರೆತ್ ಪ್ರಸ್ತಾವನೆಗೈದರು. ಜಾನೆಟ್ ಮಿನೇಜಸ್ ನಿರೂಪಿಸಿ, ಕೋಶಾಧಿಕಾರಿ ಡೈನಾ ಸಲ್ಡಾಹ್ನಾ ವಂದಿಸಿದರು.