ಕಾರ್ಕಳ: ಹೆಬ್ರಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಮುನಿಯಾಲು ಗೋಪಿನಾಥ್ ಭಟ್ ಅವರನ್ನು ನೇಮಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಕಾರ್ಕಳ ಬ್ಲಾಕ್ ಅದ್ಯಕ್ಷರಾಗಿದ್ದ ಸದಾಶಿವ ದೇವಾಡಿಗ ಹಾಗೂ ಹೆಬ್ರಿ ಬ್ಲಾಕ್ ಅದ್ಯಕ್ಷರಾಗಿದ್ದ ಚಂದ್ರಶೇಖರ್ ಬಾಯರಿಯವರ ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಎರಡೂ ಬ್ಲಾಕ್ ಗಳಿಗೆ ನೂತನ ಅದ್ಯಕ್ಷರ ಆಯ್ಕೆ ನಡೆದಿದೆ.
ಬ್ಲಾಕ್ ಅದ್ಯಕ್ಷ ಸ್ಥಾನಕ್ಕೆ ಅಯ್ಕೆಯ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಡಾ. ಎಂ ವೀರಪ್ಪ ಮೊಯಿಲಿಯವರ ಮಾರ್ಗದರ್ಶನದಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ರಕ್ಷಿತ್ ಶಿವರಾಂ ಹಾಗೂ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿಯವರು ಸಮ್ಮುಖದಲ್ಲಿ ಪಕ್ಷದ ಮುಖಂಡರು ಹಾಗೂ ವಿವಿದ ಘಟಕದ ಪಧಾದಿಕಾರಿಗಳ ಅಭಿಪ್ರಾಯವನ್ನು ಕಾಂಗ್ರೆಸ್ ಕಚೇರಿಯಲ್ಲಿ ಸಂಗ್ರಹಿಸಲಾಗಿತ್ತು.
ಮುನಿಯಾಲು ಗೋಪಿನಾಥ್ ಭಟ್ ಅವರು ಪಕ್ಷ ಸಂಘಟನಾ ಚತುರ ಹಾಗೂ ಸರಳ ವ್ಯಕ್ತಿತ್ವದವರಾಗಿದ್ದು ವರಂಗ ಪಂಚಾಯಿತಿ ಎರಡನೇ ಬಾರಿ ಸದಸ್ಯರಾಗಿ ಅಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದು, ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿರುವ ಹಿನ್ನೆಲೆಯಲ್ಲಿ ಅವರನ್ನು ಸರ್ವಸಮ್ಮತವಾಗಿ ಆಯ್ಕೆ ಮಾಡಲಾಗಿದೆ.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷೆಗಳು ಇದ್ದರೂ ಅಂತಿಮವಾಗಿ ಶುಭದ ರಾವ್ ಆಯ್ಕೆ ಮಾಡಲಾಗಿದೆ.
ಅದ್ಯಕ್ಷರ ಆಯ್ಕೆ ಆದೇಶ ಪ್ರತಿಯನ್ನು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಕಾಂಗ್ರೇಸ್ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ಸದಾಶಿವ ದೇವಾಡಿಗ, ಚಂದ್ರಶೇಖರ ಬಾಯಾರಿ, ಪ್ರವೀಣ್ ಬಲ್ಲಾಳ್, ರಮೇಶ್ ಕಾಂಚನ್, ಅಜಿತ್ ಹೆಗ್ಡೆ ಮಾಳ, ಲಕ್ಷ್ಮಣ್ ಆಚಾರ್, ಅಮೃತ್ ಶೆಣೈ, ವಿವೇಕಾನಂದ ಶೆಣೈ, ಸುಧಾಕರ ಶೆಟ್ಟಿ, ಹೇಮಂತ್ ಆಚಾರ್ಯ, ಕೃಷ್ಣ ಶೆಟ್ಟಿ ಬಜಗೋಳಿ, ಸುನೀಲ್ ಭಂಡಾರಿ, ಯೋಗೀಶ್ ಇನ್ನಾ, ದೀಪಕ್ ಶೆಟ್ಟಿ, ಪ್ರದೀಪ್ ಬೇಲಾಡಿ, ಸಂಜಯ್ ಆಚಾರ್ಯ ಉಡುಪಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.