ಹಾಸನ: ದೇಶ ಕಂಡ ಅಭೂತಪೂರ್ವ ರಾಷ್ಟ್ರಪ್ರೇಮಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ಅನೇಕ ಹೋರಾಟಗಾರರ ಹೋರಾಟದ ಫಲಶೃತಿಯಾಗಿ ದೇಶ ಸ್ವತಂತ್ರಗೊಂಡಿದೆ, ಅವರೆಲ್ಲರ ಹೋರಾಟ ಬಲಿದಾನಗಳನ್ನು ಸ್ಮರಿಸಿಕೊಳ್ಳುತ್ತಾ ಈ ಪುಣ್ಯಭರತವರ್ಷಿಣಿಯಲ್ಲಿ ಜನ್ಮ ಪಡೆದ ನಾವೇ ಧನ್ಯರು, ಇದು ಅರ್ಪಣೆಯ ಭೂಮಿ, ನಾವೆಲ್ಲರೂ ಇಲ್ಲಿ ಜಾತ್ಯಾತೀತವಾಗಿ ಒಗ್ಗೂಡಿ ಬಾಳಿ ಸ್ವಾತಂತ್ರ್ಯಕ್ಕೆ ಹೊಸ ಅರ್ಥ ಕಲ್ಪಿಸಬೇಕು, ವಿದ್ಯಾರ್ಥಿಗಳೇ ಭವ್ಯ ಭಾರತಕ್ಕೆ ಭಾರತಾಂಬೆಗೆ ಧಕ್ಕೆ ಬರೆದಂತೆ ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ದೇಶದ ಸತ್ಪ್ರಜೆಗಳಾಗಿ ಬಾಳಬೇಕಿದೆ ಎಂದು ಸಾಹಿತಿ ರೇಶ್ಮಾ ಶೆಟ್ಟಿ ಗೊರೂರು ಹೇಳಿದರು.
ಅವರು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಗೊರೂರು ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ರೇಷ್ಮಾ ಶೆಟ್ಟಿ ಮಾತನಾಡಿದರು.
ಸಂಸ್ಥೆಯ ಮುಖ್ಯಶಿಕ್ಷಕ ಶಬಾನ ಗೊರೂರು ಮಾತನಾಡಿ,ಈ ಸಂಭ್ರಮಾಚರಣೆ ಕೇವಲ ಸ್ವಾತಂತ್ರ್ಯ ದಿನಕ್ಕಷ್ಟೇ ಸೀಮಿತ ಆಗದಿರಲಿ, ಪ್ರತಿದಿನವೂ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಬೇಕಿದೆ,ಇದು ರಾಷ್ಟ್ರೀಯ ಹಬ್ಬವಾಗಿ ಪ್ರತಿ ಭಾರತೀಯರಿಗೂ ಸಂಭ್ರಮದ ಜ್ಯೋತಕವಾಗಿದೆ ಎಂದರು.
ಸಂಸ್ಥೆಯ ಶಿಕ್ಷಕ ನವೀನ್ ರಾಜ್ ಗೊರೂರು ಅವರು ಮಾತನಾಡಿ ಇಂದಿನ ವಿದ್ಯಾರ್ಥಿಗಳು ನಾಳಿನ ಭವ್ಯ ಭಾರತದ ಪ್ರಜೆಗಳು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಹಾದಿಯನ್ನು ಸ್ಮರಿಸುತ್ತಾ ಜೀವನದಲ್ಲಿ ವಿಜಯ ಸಾಧಿಸಲು ಸ್ವಾತಂತ್ರ್ಯ ಹೋರಾಟಗಾರರನ್ನೇ ಸ್ಫೂರ್ತಿಯಾಗಿಸಿಕೊಳ್ಳೋಣ ಎಂದು ಕರೆಕೊಟ್ಟರು.
ಕನ್ನಡ ಶಿಕ್ಷಕಿ ಮಂಜುಳಾ ಗೊರೂರು ಸ್ವಾಗತಿಸಿದರು, ಶಾಂಭವಿ ಗೊರೂರು ರಾಷ್ಟ್ರಗೀತೆ ಹಾಡಿದರು,ಜುಬೇದಾ ಗೊರೂರು ಪ್ರಾರ್ಥಿಸಿದರು,ಹಾಗೂ ಶಿಕ್ಷಕರುಗಳಾದ ಪೂಜಾ, ರಂಜಿತಾ,ಸಮೀನಾ ತಾಜ್, ಸಬಿಹಾ ಉಪಸ್ಥಿತರಿದ್ದು ರಾಷ್ಟ್ರ ಭಕ್ತಿಗೀತೆಗಳನ್ನು ಹಾಡಿದರು.
ಧ್ವಜಾರೋಹಣದ ಕೊನೆಯಲ್ಲಿ ಮಕ್ಕಳೆಲ್ಲರಿಗೂ ಸಿಹಿ ಹಂಚಿ ವಿದ್ಯಾರ್ಥಿ ನಾಯಕ ವಿಮರ್ಶ್ ಸರ್ವರಿಗೂ ವಂದಿಸಿದರು.
`