ಕಾರ್ಕಳ: ಗ್ರಾಮೀಣ ಭಾಗದ ಬಹುತೇಕ ಕಡೆಗಳಲ್ಲಿ ಇಂದಿಗೂ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೇ ಜನ ನಿತ್ಯದ ಓಡಾಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಕಳ ತಾಲೂಕಿನ ತೀರಾ ಗ್ರಾಮೀಣ ಪ್ರದೇಶವಾಗಿರುವ ಕಣಂಜಾರು ಗ್ರಾಮದ ಜನರ ಬಹುಕಾಲದ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ಸೌಲಭ್ಯ ಕೊನೆಗೂ ಆರಂಭಗೊಂಡಿದೆ.
ಸ್ಥಳೀಯ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜತೆ ಮಾತುಕತೆ ನಡೆಸಿ ಅವರ ಪ್ರಯತ್ನದ ಫಲವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಯವರ ಮೂಲಕ ಕಣಂಜಾರು,ಮಡಿಬೆಟ್ಟು ಮಾರ್ಗಕ್ಕೆ ಗ್ರಾಮಾಂತರ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಗ್ರಾಮಾಂತರ ಸರ್ಕಾರಿ ಬಸ್ ಸೇವೆಯಿಂದ ನಿತ್ಯ ಶಾಲಾ ಕಾಲೇಜುಗಳಿಗೆ,ಕಚೇರಿಗಳಿಗೆ ಹೋಗುವವರಿಗೆ ಉಪಯೋಗವಾಗಿದೆ,ಇದಲ್ಲದೇ ಪ್ರಮುಖವಾಗಿ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ.
ಉಡುಪಿ ಕಣಂಜಾರು ಕಾರ್ಕಳ ಮಾರ್ಗವಾಗಿ
ದಿನಕ್ಕೆ 8 ಟ್ರಿಪ್ ಓಡಾಟ ನಡೆಸಲಿದ್ದು ಈ ಭಾಗದ ಜನರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ.














