ಬೆಂಗಳೂರು : ಕಳೆದ ಎರಡು ತಿಂಗಳ ಹಿಂದೆ ಗೃಹಲಕ್ಷ್ಮಿ ಯೋಜನೆಯಲ್ಲಿ 16 ಸಾವಿರ ಜಿಎಸ್‌ಟಿ ಹಾಗೂ ಐಟಿ ಇದ್ದ ಕಾರ್ಡ್ಗಳನ್ನ ರದ್ದು ಮಾಡಿ ಗೃಹಿಣಿಯರಿಗೆ ಮಹಿಳಾ ಅಭಿವೃದ್ಧಿ ಇಲಾಖೆ ಶಾಕ್ ಕೊಟ್ಟಿತ್ತು. ಇದರ ಬೆನ್ನಲ್ಲೇ ಅನ್ನಭಾಗ್ಯ ಯೋಜನೆಯಲ್ಲಿ ಇದೀಗ ಬಿಪಿಎಲ್ ಕಾಡ್ ನಲ್ಲಿ 10 ಸಾವಿರ ಫಲಾನುಭವಿಗಳ ಕಾರ್ಡ್ ಗಳನ್ನು ರದ್ದು ಮಾಡಿದ್ದು, ಈ ಕಾರ್ಡ್ ಗಳ ಫಲಾನುಭವಿಗಳು ಪಡೆಯುತ್ತಿದ್ದ ಸೌಕರ್ಯಗಳನ್ನ ರದ್ದು ಮಾಡಲಾಗಿದೆ.
ಬಿಪಿಎಲ್ ಕಾರ್ಡ್ ಗಳಲ್ಲಿ ಇದ್ದವರಿಗೆ ಆಯುಷ್ಮಾನ್, ವಿದ್ಯಾರ್ಥಿ ವೇತನ, ಸಿಎಂ ಪರಿಹಾರ ನಿಧಿ, ನರೇಗಾ ಯೋಜನೆ ಸೇರಿದಂತೆ ವ್ಯಯಕ್ತಿಕ ಕಾಮಾಗಾರಿಯನ್ನ ಕೈಗೊಳ್ಳುವಂತಹ ಸೌಕರ್ಯಗಳು ಸಿಗುತ್ತಿದ್ದವು. ಆದರೆ ಈ ಸೌಕರ್ಯಗಳನ್ನು ಇದೀಗ ರದ್ದಾಗುವ ಸಾಧ್ಯತೆ ಇದ್ದು, ಫಲಾನುಭವಿಗಳಿಗೆ ಸದ್ಯ ಶಾಕ್ ಉಂಟಾಗಿದೆ.
ಆಹಾರ ನಾಗರಿಕ ಸರಬರಾಜು ಇಲಾಖೆ ಎಪಿಎಲ್ ಕಾರ್ಡ್ ಗಳನ್ನು ಕೂಡ ರದ್ದು ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಈ ಕುರಿತು ಆಹಾರ ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ ಕೊಟ್ಟಿದ್ದು, ನಿರ್ದೆಶನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯೂ ಯಾವುದೇ ಎಪಿಎಲ್ ಕಾರ್ಡುಗಳ ರದ್ದತಿಗೆ ಯಾವುದೇ ಸೂಚನೆ ನೀಡಿಲ್ಲ. ಯಾವುದೇ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿಲ್ಲ ಎಂದಿದ್ದಾರೆ.
ಕೆಲವು ದಿನಪತ್ರಿಕೆಗಳಲ್ಲಿ ಇ-ಕೆವೈಸಿ ನೋಂದಣಿ ಮಾಡಿಕೊಳ್ಳದ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ. ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ 2 ರಂದು 25,13,798 ಎಪಿಎಲ್ ಕಾರ್ಡುಗಳಿದ್ದವು. ಇಂದು ನವೆಂಬರ್ 16 ರಂದು 25,62,566 ಕಾರ್ಡುಗಳಿವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಕಾರ್ಯ ಕೈಗೊಂಡ ಪರಿಣಾಮ, ಕೆಲವು ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಪರಿವರ್ತಿಸಿರುವುದರಿಂದ 48,768 ಕಾರ್ಡುಗಳು ಹೆಚ್ಚಳವಾಗಿವೆ. ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಸುದ್ದಿ ಸತ್ಯ ಸಂಗತಿಯಲ್ಲ ಇಲಾಖೆ ಪ್ರಕಟಣೆ ತಿಳಿಸಿದೆ.
ಬಿಪಿಎಲ್ ಕಾರ್ಡ್ ನಲ್ಲಿ ಸದ್ಯ ಪರಿಷ್ಕರಣೆ ನಡೆಯುತ್ತಿದ್ದು, ಐಟಿ ಕಾರ್ಡ್ ಗಳನ್ನ ರದ್ದು ಮಾಡಲಾಗಿದೆ. ಬಿಪಿಎಲ್ ಗೆ ಅರ್ಹತೆ ಇಲ್ಲದೇ ಇರುವ ಫಲಾನುಭವಿಗಳು ಎಪಿಎಲ್ ಗೆ ಬದಲಾವಣೆ ಮಾಡುತ್ತಿದ್ದು, ಸದ್ಯ ಫಲಾನುಭವಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.