Share this news

ಕಾರ್ಕಳ: ಕಳೆದ ಎರಡು ದಶಕಗಳಿಂದ ನಕ್ಸಲ್ ನಾಯಕನಾಗಿ ಕೇರಳ ಹಾಗೂ ಕರ್ನಾಟಕ ಪೊಲೀಸರಿಗೆ ಬೇಕಾಗಿದ್ದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿಯಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಕಬಿನಿ ದಳದ ಮುಖಂಡ ವಿಕ್ರಮ್ ಗೌಡ ಇದೀಗ ತನ್ನ ಹುಟ್ಟೂರಲ್ಲೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ನಾಡ್ಪಾಲು ಗ್ರಾಮದ ಪೀತಬೈಲು ಎಂಬಲ್ಲಿ ವಿಕ್ರಮ್ ಗೌಡನ ಚಿಕ್ಕಮ್ಮನ ಮನೆಯ ಪಕ್ಕದಲ್ಲೇ ಪೊಲೀಸರು ಆತನನ್ನು ಎನ್‌ಕೌಂಟರ್ ನಡೆಸಿ ನಕ್ಸಲರ ಜಂಘಾಬಲವನ್ನೇ ಉಡುಗಿಸಿದ್ದಾರೆ. ಕುದುರೆಮುಖ ರಾಷ್ಟಿçÃಯ ಉದ್ಯಾನವನದಿಂದ ಒಕ್ಕಲೆಬ್ಬಿಸುವುದನ್ನು ವಿರೋಧಿಸಲು ನಕ್ಸಲರ ಜತೆ ಕೈಜೋಡಿಸಿದ್ದ ವಿಕ್ರಮ್ ಗೌಡ ಓದಿದ್ದು ಕೇವಲ 4ನೇ ತರಗತಿ, ಆದರೂ ತನ್ನ ಸಂಘಟನಾ ಶಕ್ತಿಯಿಂದ ಕೇರಳ ಹಾಗೂ ಕರ್ನಾಟಕದಲ್ಲಿ ಕಬಿನಿ ದಳ ಎನ್ನುವ ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ಕಳೆದ ಎರಡು ಮೂರು ದಿನಗಳಿಂದ ಕಬ್ಬಿನಾಲೆಯ ಪೀತಬೈಲು ಭಾಗದಲ್ಲಿ ಇರುವ ಕುರಿತು ಖಚಿತ ಮಾಹಿತಿ ಪಡೆದ ಎಎನ್‌ಎಫ್ ಪೊಲೀಸರು ಸೋಮವಾರ ರಾತ್ರಿ 9.30ರ ಸುಮಾರಿಗೆ ವಿಕ್ರಮ್ ಗೌಡ ನೇತೃತ್ವದ ತಂಡವನ್ನು ಸುತ್ತುವರಿದು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ ವಿಕ್ರಮ್ ಗೌಡ ಹತನಾದರೆ ಉಳಿದ ಇಬ್ಬರು ಪರಾರಿಯಾಗಿದ್ದಾರೆ.

ಕಾರ್ಕಳ ತಾಲೂಕಿನ ಈದು ಗ್ರಾಮದ ಬಲ್ಯೊಟ್ಟಿನಲ್ಲಿ ನಕ್ಸಲರ ಓಡಾಟದ ಕುರಿತು ಹಬ್ಬಿದ್ದ ವದಂತಿಯ ನಡುವೆ ಇದೀಗ ಹೆಬ್ರಿಯ ಕಬ್ಬಿನಾಲೆ ಭಾಗದಲ್ಲಿ ಪೊಲೀಸರ ಗುಂಡಿಗೆ ನಕ್ಸಲ್ ನಾಯಕ ವಿಕ್ರಮ್ ಗೌಡ ಬಲಿಯಾಗಿದ್ದು, ಕಳೆ 2012ರಲ್ಲಿ ಗುಂಡಿ ಸದಾಶಿವ ಗೌಡನನ್ನು ಪೊಲೀಸ್ ಮಾಹಿತಿದಾರ ಎನ್ನುವ ಆರೋಪದ ಮೇರೆಗೆ ಆತನನ್ನು ಕಬ್ಬಿನಾಲೆಯ ತೆಂಗುಮಾರಿನಿAದ ಅಪಹರಿಸಿ ಬಳಿಕ ಮರಕ್ಕೆ ಕಟ್ಟಿ ಹಾಕಿ ಭೀಕರವಾಗಿ ಹತ್ಯೆಗೈದಿದ್ದರು.ಈ ಪ್ರಕರಣದ ವಳಿಕ ಬರೊಬ್ಬರಿ 12 ವರ್ಷಗಳ ಬಳಿಕ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ನಕ್ಸಲರ ನೆತ್ತರು ಹರಿದಿದೆ. ಈ ಘಟನೆ ಕುರಿತು ಆಂತರಿಕ ಭದ್ರತಾ ದಳದ ಐಜಿಪಿ ರೂಪಾ, ಡಿ ಮೌದ್ಗಿಲ್ ಮಾಧ್ಯಮಗಳ ಜತೆ ಮಾತನಾಡಿ, ಮೋಸ್ಟ್ ವಾಂಟೆಡ್ ವಿಕ್ರಮ್ ಗೌಡನ ವಿರುದ್ಧ ಕರ್ನಾಟಕದಲ್ಲಿ ಒಟ್ಟು 61 ಪ್ರಕರಣಗಳು ಹಾಗೂ ಕೇರಳದಲ್ಲಿ 19 ಪ್ರಕರಣಗಳು ದಾಖಲಾಗಿದ್ದವು.ಆತ ಕಬ್ಬಿನಾಲೆ ಭಾಗದಲ್ಲಿ ಓಡಾಟ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಕೂಂಬಿAಗ್ ಕಾರ್ಯಾಚರಣೆ ನಡೆಸಿ ಶರಣಾಗುವಂತೆ ಆತನಿಗೆ ಸೂಚಿಸಿದರೂ ಆತ ಗುಂಡು ಹಾರಿಸಿದಾಗ ಪೊಲೀಸರ ಗುಂಡಿಗೆ ವಿಕ್ರಮ್ ಗೌಡ ಬಲಿಯಾಗಿದ್ದಾನೆ ಎಂದು ತಿಳಿಸಿದರು.

ವಿಕ್ರಮ್ ಗೌಡ ಎನ್‌ಕೌಂಟರಿಗೆ ಬಲಿಯಾಗಿದ್ದು ಇನ್ನುಳಿದ ನಕ್ಸಲರ ಶೋಧಕ್ಕೆ ಪೊಲೀಸರು ಕೂಂಬಿAಗ್ ಕಾರ್ಯಾಚರಣೆ ತೀವೃಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನಕ್ಸಲರನ್ನು ಸಂಪೂರ್ಣವಾಗಿ ಮಟ್ಟ ಹಾಕಲಾಗುವುದು ಎಂದು ರೂಪಾ ಡಿ ಮೌದ್ಗಿಲ್ ಸ್ಪಷ್ಟಪಡಿಸಿದ್ದಾರೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *