ಹೆಬ್ರಿ: ಹೆಬ್ರಿಯ ಕನ್ಯಾನ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಸಂಘದವತಿಯಿಂದ ತಮ್ಮ ಬಾಲ್ಯದ ದಿನಗಳಲ್ಲಿ ತಮಗೆ ವಿದ್ಯೆ ಕಲಿಸಿದ ಗುರುಗಳಾದ ಶಿವಪುರ ನಾರಾಯಣ ಅಡಿಗ ಹಾಗೂ ಕೆರೆಬೆಟ್ಟು ಜಯರಾಮ್ ಶೆಟ್ಟಿ ಅವರ ಸ್ವಗ್ರಹಕ್ಕೆ ತೆರಳಿ ಗುರುವಂದನೆ ಸಲ್ಲಿಸಿದರು.
ಸಂಘದ ಅಧ್ಯಕ್ಷರಾದ H k ಸುಧಾಕರ್ ಅವರು ಮಾತನಾಡಿ, ಬಾಲ್ಯದಲ್ಲಿ ಉತ್ತಮ ಶಿಕ್ಷಕ ವೃಂದದ ಮಾರ್ಗರ್ಶನದಿಂದ ಇಂದು ಸಮಾಜದಲ್ಲಿ ಗುರುತಿಸಿಕೊಂಡು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಗುರುಗಳಿಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ನಾಯಕ್, ಸಂತೋಷ್ ನಾಯಕ್ , ಸುಧಾಕರ್ ಸದಸ್ಯರಾದ ಅರುಣ್ ಶೆಟ್ಟಿ, ರವೀಂದ್ರ ಶೆಟ್ಟಿ, ಚಂದ್ರ ಶೆಟ್ಟಿ, ಅಮಿತ ಟೀಚರ್, ಸುಮಿತ್ರಾ, ದೇವು k, ಪ್ರವೀಣ್ ಶೆಟ್ಟಿ ಹಾಜರಿದ್ದರು. ಕಾರ್ಯದರ್ಶಿ ಶ್ರೀಧರ್ ಶೆಟ್ಟಿ, ನಿರೂಪಿಸಿ, ಯಶೋದಾ ಶೆಟ್ಟಿ ವಂದಿಸಿದರು.