Share this news

ಕರಾವಳಿ ನ್ಯೂಸ್ ಡೆಸ್ಕ್:
ಇಂದು ವರಮಹಾಲಕ್ಷ್ಮೀ ಹಬ್ಬ. ಶ್ರಾವಣ ಮಾಸದ ಶುಕ್ಲ ಪಕ್ಷದ ಮೊದಲ ಶುಕ್ರವಾರ ನಾವು ಈ ಹಬ್ಬ ಆಚರಿಸುತ್ತೇವೆ. ಶ್ರಾವಣ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರ ಎಂದರೂ ಸರಿಯೇ. ಶ್ರಾವಣ ಶುಕ್ಲ ಪೂರ್ಣಿಮೆ ದಿವಸ ಶುಕ್ರ ಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ ಅಥವಾ ಶುಕ್ಲಪೂರ್ಣಿಮೆಯ ಅತಿ ಹತ್ತಿರದ ಶುಕ್ರವಾರದಂದು ವರಮಹಾಲಕ್ಷ್ಮೀ ಆರಾಧನೆ ಮಾಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಹಬ್ಬಗಳು ಉತ್ತರಾಯಣದಲ್ಲಿ ಹೆಚ್ಚು ಬಂದರೆ, ವ್ರತ ದಕ್ಷಿಣಾಯಣದಲ್ಲಿ ಬರುತ್ತದೆ. ವರಮಹಾಲಕ್ಷ್ಮೀಯು ವ್ರತವಾಗಿದ್ದು, ಅಷ್ಟಲಕ್ಷ್ಮಿಯರನ್ನು ಒಲಿಸಿಕೊಳ್ಳಲು ವಿವಾಹಿತ ಮಹಿಳೆಯ ವರಲಕ್ಷ್ಮಿಯು ಭಗವಾನ್ ವಿಷ್ಣುವಿನ ಪತ್ನಿಯೇ ಆಗಿದ್ದು, ಮಹಾಲಕ್ಷ್ಮಿಯ ಹಲವು ರೂಪಗಳಲ್ಲಿ ಒಂದಾಗಿದೆ. ವರಮಹಾಲಕ್ಷ್ಮಿ ದೇವಿಯು ಮೊದಲ ಬಾರಿಗೆ ಕ್ಷೀರಸಾಗರದಿಂದ ಪ್ರಕಟಗೊಂಡಳು.
ಆದಿಲಕ್ಷ್ಮೀ, ಧ್ಯಾನಲಕ್ಷ್ಮೀ, ಧೈರ್ಯ ಲಕ್ಷ್ಮೀ, ಗಜಲಕ್ಷ್ಮೀ, ಸಂತಾನಲಕ್ಷ್ಮೀ, ವಿಜಯ ಲಕ್ಷ್ಮೀ, ಐಶ್ವರ್ಯಲಕ್ಷ್ಮೀ, ಧನಲಕ್ಷ್ಮೀ ಎಂಬ ಅಷ್ಟರೂಪನಾಮಗಳಿಂದ ರರಾಜಿಸುವವಳು ಶ್ರೀ ವರಮಹಾಲಕ್ಷ್ಮೀ. ಲಕ್ಷ್ಮೀಯ ಸೌಂದರ್ಯ ವರ್ಣಾತೀತ. ಲಕ್ಷ್ಮೀ ಎಂದರೆ ಚೆಲುವು, ಶೋಭೆ ಹಾಗೂ ಸಂಪತ್ತು. ಲಕ್ಷ್ಮೀ ಎಂದರೆ ಶುಭ-ಲಾಭ. ಲಕ್ಷ್ಮೀ ಎಂದರೆ ಶುಭ ಶಕುನ-ಶುಭ ಲಕ್ಷಣ. ಆಕೆಯನ್ನು ಪೂಜಿಸುವುದೇ ಪುಣ್ಯ ಕಾಲ. ವರಮಹಾಲಕ್ಷ್ಮೀಯನ್ನು ಮನೆತನದ ದಾರಿದ್ರ‍್ಯ ನಾಶ ಮಾಡುವುದಕ್ಕಾಗಿ, ಆಯುರಾರೋಗ್ಯ ಲಾಭಕ್ಕಾಗಿ ಪೂಜೆ ಮಾಡಲಾಗುತ್ತದೆ.

ಯಾರು ಶ್ರದ್ಧಾ ಭಕ್ತಿಗಳಿಂದ ಲಕ್ಷ್ಮೀಯನ್ನು ಹೀಗೆ ಪೂಜಿಸುತ್ತಾರೋ, ಅವರಿಗೆ ಲಕ್ಷ್ಮೀ ದೇವಿಯು ಆಯುಷ್ಯ ಆರೋಗ್ಯ, ಐಶ್ವರ್ಯ ಭಾಗ್ಯ, ಸೌಭಾಗ್ಯಗಳನ್ನು ಅನುಗ್ರಹಿಸುತ್ತಾಳೆ. ಎಲ್ಲರಿಗೂ ವರಮಹಾಲಕ್ಷ್ಮೀಯ ಕೃಪ ಕಟಾಕ್ಷ ದೊರೆಯಲಿ. ಹಬ್ಬದ ಶುಭಾಶಯಗಳು.

 


 

 

                        

                          

                        

                          

 

`

Leave a Reply

Your email address will not be published. Required fields are marked *