ಮೂಡಬಿದಿರೆ: ಸಾಧನೆಗೆ ನಿರ್ದಿಷ್ಟ ಗುರಿ ಮತ್ತು ಸತತ ಪ್ರಯತ್ನದ ಅಗತ್ಯ ಇದೆ. ಪ್ರಯತ್ನ ಪಡದೇ ಯಾವುದನ್ನು ಕೂಡ ಕಷ್ಟ ಎನ್ನುವುದು ಸರಿಯಲ್ಲ, ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಗೆಲುವನ್ನು ಸಂಭ್ರಮಿಸುವ ಹಾಗೆ ಸೋಲನ್ನು ಕೂಡ ಸ್ವೀಕರಿಸುವ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಒತ್ತಡ ಮುಕ್ತವಾಗಿ ಜೀವನ ನಡೆಸಲು ಜೀವನ ಕೌಶಲ್ಯಗಳನ್ನು ಕಲಿಸಿಕೊಡುವ ಅಗತ್ಯವಿದೆ ಎಂದು ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಪೋಡಾರು ಜಯರಾಮ ಆಳ್ವ ಅಭಿಪ್ರಾಯ ಪಟ್ಟರು.
ಅವರು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕರಾದ ಕಡೆಂಜ ಸೋಮಶೇಖರ್ ಚೌಟ ಅವರು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕಗಳನ್ನು ಗಳಿಸಿದ ಮೊಹಮ್ಮದ್ ಶಾಕೀರ್, ಸುಶಾಂತ್, ವರ್ಷ, ನಮ್ಯತ, ಸಮೃದ್ಧಿ ಇವರುಗಳನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ವರ್ಷದ ವಿದ್ಯಾಶ್ರೀ ಶೈಕ್ಷಣಿಕ ದತ್ತು ಯೋಜನೆಯ ಬಿತ್ತಿಪತ್ರಿಕೆಯನ್ನು ಶಾಲಾ ಸಂಚಾಲಕರಾದ ಕಡೆಂಜ ಸೋಮಶೇಖರ್ ಚೌಟ ಬಿಡುಗಡೆ ಗೊಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾಲತಾ ಶಾಲಾ ನಿಯಮಗಳನ್ನು ವಿವರಿಸಿದರು
2024ನೇ ಸಾಲಿಗೆ ಶಾಲಾ ಶಿಕ್ಷಕ ರಕ್ಷಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು.
ಅಧ್ಯಕ್ಷರಾಗಿ ಶ್ರೀಮತಿ ಲೋಲಿಟ ಅವರು ಆಯ್ಕೆ ಯಾದರು.
ಗೌರವಾಧ್ಯಕ್ಷೆಯಾಗಿ ಉಷಾಲತ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಮಜಿದ್ ಅಬ್ದುಲ್ ರಹಿಮಾನ್, ದಯಾವತಿ, ಝೀನತ್ ಪ್ರಧಾನ ಕಾರ್ಯದರ್ಶಿಯಾಗಿ ಮಹಮದ್ ಅಶ್ರಫ್
ಕೋಶಾಧಿಕಾರಿಯಾಗಿ ಲತಾ , ಸಂಘಟನಾ ಕಾರ್ಯದರ್ಶಿಯಾಗಿ ಸೆಫಿಯ, ಕ್ರೀಡಾ ಕಾರ್ಯದರ್ಶಿಯಾಗಿ, ಇಸ್ಮಾಯಿಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಿಯಾ ಕಾರ್ಯಕಾರಿಣಿ ಸದಸ್ಯರಾಗಿ ರೇಖಾ ಶ್ರೀಮತಿ ಜಯಂತಿ ಜಿತೇಂದ್ರ ವೀಣಾ, ಹೇಮಲತಾ, ತನಿಯಪ್ಪ, ರೆಹನ, ಮಾಲತಿ, ಸೆಕಿನಾ ಬಿ. ಆಯ್ಕೆ ಯಾದರು.ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಮಜೀದ್,
ಶಾಲಾ ಶಿಕ್ಷಕರುಗಳಾದ ಕುಮುದ, ಕೃಷ್ಣಶಾಸ್ತ್ರಿ ಶಿವಣ್ಣ, ಸ್ಮಿತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಪ್ರಸ್ತಾವನೆಗೈದರು , ಹಿರಿಯ ಶಿಕ್ಷಕರಾದ ರವಿಶಂಕರ್ ಸ್ವಾಗತಿಸಿದರು, ಶಿಕ್ಷಕಿ ಮೋಹಿನಿ ಧನ್ಯವಾದವಿತ್ತರು.
`