Share this news

ಕಾರ್ಕಳ: ರಾಮಮಂದಿರ ಟ್ರಸ್ಟ್, ಅಜೆಕಾರು, ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಅಜೆಕಾರು , ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಾಹೆ ಮಣಿಪಾಲ, ಕಾರ್ಡಿಯಾಲಜಿ ಅಟ್ ಡೋರ್ಸ್ಟೆಪ್ ಫೌಂಡೇಶನ್ (ಕ್ಯಾಡ್) ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಖ್ಯಾತ ಹೃದಯ ತಜ್ಞ ಡಾ|ಪದ್ಮನಾಭ ಕಾಮತ್ ಅವರ ನೇತೃತ್ವದಲ್ಲಿ ಫೆ.25 ರಂದು ಭಾನುವಾರ ಅಜೆಕಾರು ರಾಮಮಂದಿರದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರವು ಬೆಳಗ್ಗೆ 8 ರಿಂದ ಮಧ್ಯಾಹ್ನ 12.30 ವರೆಗೆ ನಡೆಯಲಿದೆ.

 

ಕೋವಿಡ್ ಬಳಿಕ ಯುವ ಜನತೆ ಹೃದಯಾಘಾತದಿಂದ ಸಾವನ್ನಪ್ಪುವ ಸಂಖ್ಯೆ ಹೆಚ್ಚಳವಾಗುತ್ತಿರುವ ವಿಚಾರ ಆತಂಕಕ್ಕೀಡು ಮಾಡಿದೆ. ದೈಹಿಕ ವ್ಯಾಯಾಮ, ಗುಣಮಟ್ಟದ ಆಹಾರ ಸೇವನೆ ಹಾಗೂ ದುಶ್ಚಟಗಳಿಂದ ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಬೀರುವ ನಿಟ್ಟಿನಲ್ಲಿ ಹೃದಯದ ಆರೋಗ್ಯ ಕಾಪಾಡುವುದು ಅಷ್ಟೇ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಬಡವರ ಆರೋಗ್ಯದ ಹಿತದೃಷ್ಟಿಯಿಂದ ಸ್ಥಳೀಯ ಸಂಘಸಂಸ್ಥೆಗಳು ಅಜೆಕಾರಿನಲ್ಲಿ ಉಚಿತ ಹೃದಯದ ಆರೋಗ್ಯ ತಪಾಸಣಾ ಈ ಶಿಬಿರವನ್ನು ಹಮ್ಮಿಕೊಂಡಿವೆ. ಸಾಮಾನ್ಯ ಹೃದಯ ತಪಾಸಣೆ, ಮಧುಮೇಹ ಮತ್ತು ರಕ್ತದೊತ್ತಡ ದಿಂದ ಬಳಲುತ್ತಿರುವವರು,ಹೃದಯ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿರುವವರು, ಹೃದಯ ಚಿಕಿತ್ಸೆಗೆ ಒಳಗಾದವರು, ಕೆಂಜಿನಿಟಲ್ ಹಾರ್ಡ್ ರಿಮಾಟಿಕ್ ಹಾರ್ಟ್ ತೊಂದರೆಗೆ ಒಳಗಾದವರು, ಹೃದಯ ತೊಂದರೆ ಸಂಬಂಧಿತ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ.

 

ಫೆ.19 ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ  ನಿಗದಿ ಪಡಿಸಿದ ಸೋಮವಾರದಿಂದ ಗ್ರಾಮ‌ ವ್ಯಾಪ್ತಿಗಳ ಎಲ್ಲಾ ಇಸಿಜಿ ಕೇಂದ್ರ ಗಳಲ್ಲಿ ಪೂರ್ವ ದಲ್ಲಿ ರಿಜಿಸ್ಟ್ರಾರ್ ಮಾಡಬಹುದು. ಇದರಿಂದಾಗಿ ಸಲಹೆ ಸೂಚನೆಗಳನ್ನು ವೇಗವಾಗಿ ಪಡೆಯಲು ಸಾಧ್ಯವಾಗಲಿದೆ. ಅಜೆಕಾರುಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೆರಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮುನಿಯಾಲು, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರ್ಗಾನ , ಇದರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ.    

 

             

Leave a Reply

Your email address will not be published. Required fields are marked *