ಹೆಬ್ರಿ : ವ್ಯಕ್ಯಿಯೊಬ್ಬರು ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುತ್ತಿದ್ದ ವೇಳೆ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ಸಲ್ಲಾಬಿ ದೇವರಗುಂಡಿ ಎಂಬಲ್ಲಿ ಸೋಮವಾರ ನಡೆದಿದೆ.
ವಾಸು (59) ಮೃತಪಟ್ಟ ದುರ್ದೈವಿ.ವಾಸು ಅವರು ಈಗಾಗಲೇ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು, ದೇವರಗುಂಡಿ ಗೋಪಾಲ ಎಂಬವರ ಅಡಿಕೆ ತೋಟದಲ್ಲಿ ಮರವನ್ನು ಹತ್ತಿ ಔಷಧಿ ಸಿಂಪಡಿಸುತ್ತಿದ್ದ ವೇಳೆ ಏಕಾಏಕಿ ರಕ್ತದೊತ್ತಡ ಹೆಚ್ಚು ಕಡಿಮೆಯಾಗಿ ಮರದಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











