

ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
618 ಅಂಕ ದೊಂದಿಗೆ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ ಮತ್ತು ಹೆಬ್ರಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದ ಪೂರ್ವಿ ಎಂ ರಾವ್, 615 ಅಂಕ ಪಡೆದ ಪ್ರತ್ಯೂಶ್ , 609 ಅಂಕ ಪಡೆದ ಅನ್ವಿತಾ ನಾಯಕ್ ಇವರನ್ನು ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್ ಮತ್ತು ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಶಿಕ್ಷಕರಾದ ಮಹೇಶ್ ಹೈಕಾಡಿ, ವೇದವ್ಯಾಸ ತಂತ್ರಿ ಮಡಾಮಕ್ಕಿ, ಪಂಚಮಿ, ಸುಮನ್ ನಾಯಕ್, ನಿಶಾನ್ ಶೆಟ್ಟಿ, ಸುಮನಾ ವಾಣಿ, ಮೀನಾಕ್ಷಿ, ನವ್ಯಾ ಪೈ, ಸುಚಿತ್ರಾ ಮತ್ತು ವಸತಿ ನಿಲಯದ ನಿತಿನ್ ಶೆಟ್ಟಿ, ವಿರೂಪಾಕ್ಷ, ಅಂಜಲಿ ಹಾಗೂ ಪೋಷಕರಾದ ಪಾರ್ವತಿ ಎಂ , ಜಿ ಸೌಮ್ಯ ಉಪಸ್ಥಿತರಿದ್ದರು.







