ಹೆಬ್ರಿ: ದೇಶಕ್ಕಾಗಿ ಬಲಿದಾನಗಳಾದ ಹುತಾತ್ಮರನ್ನು , ತಮ್ಮ ಸರ್ವಸ್ವವನ್ನು ದೇಶಕ್ಕೋಸ್ಕರ ಅರ್ಪಿಸಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕು. ಗೌರವ ಸಲ್ಲಿಸಬೇಕು . ಈ ದಿನ ನಾವೆಲ್ಲರೂ ಭಾರತೀಯರು ಸಂಕಲ್ಪ ಮಾಡಿಕೊಳ್ಳೊಣ , ದೇಶ ಕಟ್ಟುವ ಕಾಯಕವೇ ನಮ್ಮ ಧ್ಯೇಯ ವಾಗಿರಲಿ ಎಂದು ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಶ್ರೀ ಗಣೇಶ ನಾಯಕ್ ನುಡಿದರು.
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ಮಾತನಾಡಿದರು .

ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರು CA. ಎಂ. ರವಿರಾವ್ , ಕಾರ್ಯದರ್ಶಿ ಗುರುದಾಸ ಶೆಣೈ , ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷರು ಶ್ರೀ ಶೈಲೇಶ್ ಕಿಣಿ , ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು ರಾಜೇಶ ನಾಯಕ್ , ಟ್ರಸ್ಟಿನ ಸದಸ್ಯರಾದ ಬಾಲಕೃಷ್ಣ ಮಲ್ಯ , ಭಾಸ್ಕರ್ ಜೋಯಿಸ್ , ಸುಧೀರ್ ನಾಯಕ್ , ಅಮೃತ ಭಾರತಿ ವಸತಿ ನಿಲಯದ ಗೌರವ ಅಧ್ಯಕ್ಷರು ಯೋಗೀಶ್ ಭಟ್ , ಸದಸ್ಯರು ರಾಮಕೃಷ್ಣ ಆಚಾರ್ಯ , ಕರ್ನಾಟಕ ಬ್ಯಾಂಕ್ ಹೆಬ್ರಿ ಅಸಿಸ್ಟೆಂಟ್ ಮ್ಯಾನೇಜರ್ ಸುಮಂತ್ , ಶ್ರೀಮತಿ ಧಾಮಿನಿ , ಸಂಸ್ಥೆಯ ಪ್ರಾಂಶುಪಾಲರು ಅಮರೇಶ್ ಹೆಗ್ಡೆ , ಅರುಣ್ ಎಚ್. ವೈ , ಮುಖ್ಯೋಪಾಧ್ಯಾಯನಿಯರು ಅಪರ್ಣಾ ಆಚಾರ್, ಶಕುಂತಲಾ , ಅನಿತಾ , ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಬೋಧಕ ಬೋಧಕೇತರ ವರ್ಗದವರು ಹಾಜರಿದ್ದರು.ಸಂಸ್ಥೆಯ ಉಪಮುಖ್ಯೋಪಾಧ್ಯಾಯರು ಮಹೇಶ ಹೈಕಾಡಿ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು.

























`
