Share this news

ಹೆಬ್ರಿ: ಪತ್ರಿಕೆ ವಿದ್ಯಾರ್ಥಿಗಳ ಓದುವಿಕೆ ಮತ್ತು ಬರೆಯುವಿಕೆಯ ಹವ್ಯಾಸವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಥೆ ಕವನ ಬರೆಯುವಂತ ಹವ್ಯಾಸಗಳು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅಮೃತ ಭಾರತಿ ಸಂಸ್ಥೆಯು ಅಮೃತವಾಣಿ ಶಾಲೆಯಿಂದ ಮನೆಗೊಂದು ಪತ್ರಿಕೆ12 ವರ್ಷಗಳಿಂದ ಪ್ರಕಟಗೊಳ್ಳುತ್ತಿರುವುದು ಅತ್ಯಂತ ಸಂತೋಷ ತಂದಿದೆ . ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಭಾಗಿಯಾಗಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಅಮೃತ ಭಾರತಿ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ ಶೆಟ್ಟಿ ಹೇಳಿದರು.
ಅವರು ಹೆಬ್ರಿ ಅಮೃತ ಭಾರತಿ ಸಭಾಂಗಣದಲ್ಲಿ ಜುಲೈ ಮತ್ತು ಆಗಸ್ಟ್ ಮಾಸದ ಅಮೃತವಾಣಿ ಪತ್ರಿಕೆ ಅನಾವರಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಜುಲೈ ಮಾಸದ ಪತ್ರಿಕೆ ಪ್ರಾಯೋಜಕರಾದ ರಾಘವೇಂದ್ರ ಭಟ್ ಮುದ್ರಾಡಿ, ಆಗಸ್ಟ್ ಮಾಸದ ಪತ್ರಿಕೆ ಪ್ರಾಯೋಜಕರಾದ ನಾಗರಾಜ ಮಕ್ಕಿತ್ತಾಯ ನೀಲಾವರ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಅಪರ್ಣ ಆಚಾರ್, ವಿದ್ಯಾರ್ಥಿಗಳಾದ ಮತ್ತು ಸಜನಿ ಭಟ್, ವಾದಿರಾಜ ಮಕ್ಕಿತ್ತಾಯ ಉಪಸ್ಥಿತರಿದ್ದರು.

ಪಾಂಡುರAಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಆಂಗ್ಲ ಮಾಧ್ಯಮ ಹೈಸ್ಕೂಲ್ ವಿಭಾಗದಲ್ಲಿ 12 ವರ್ಷಗಳಿಂದ ಪ್ರತಿ ಶೈಕ್ಷಣಿಕ ವರ್ಷದ ಪ್ರತಿ ತಿಂಗಳು ಬಿಡುಗಡೆಗೊಳ್ಳುತ್ತಿರುವ ಪತ್ರಿಕೆ ಅಮೃತವಾಣಿ. ಪ್ರಧಾನ ಕಾರ್ಯನಿರ್ವಾಹಕ ಸಂಪಾದಕರಾಗಿ ಮಹೇಶ ಹೈಕಾಡಿ ಪತ್ರಿಕೆಯ ಪ್ರಕಟಣೆಯ ಜವಾಬ್ದಾರಿಯನ್ನು ನಿರ್ವಹಿಸಿದರು. ಈ ಶೈಕ್ಷಣಿಕ ವರ್ಷದ ಜೂನ್ ಮಾಸದ ಪತ್ರಿಕೆ ಬಿಡುಗಡೆಗೊಂಡಿದ್ದು ರವಿರಾಜ್ ಮಂಜ ಶ್ರೀಮತಿ ಭಾರತಿ ಆರ್ ಮಂಜ ಮಡಾಮಕ್ಕಿ ಇವರು ಪ್ರಾಯೋಜಕರಾಗಿದ್ದರು.
ಕಾವ್ಯ ಸ್ವಾಗತಿಸಿ, ಧೃತಿ ವಂದಿಸಿದರು. ಐಶ್ವರ್ಯ ನಿರೂಪಿಸಿದರು.

Leave a Reply

Your email address will not be published. Required fields are marked *