ಹೆಬ್ರಿ: ತಮ್ಮ ವಿಪರೀತ ಕುಡಿತದ ಚಟದಿಂದ ಬೇಸತ್ತಿದ್ದ ವಯೋವೃದ್ಧ ವ್ಯಕ್ತಿಯೊಬ್ಬರು ವಿಷ ಸೇವಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಚ್ಚೂರಿನ ಶಿವರಾಮ (84)ಆತ್ಮಹತ್ಯೆ ಮಾಡಿಕೊಂಡವರು.
ಶಿವರಾಮ ಅವರು ವಿಪರಿತ ಮದ್ಯಪಾನ ಮಾಡುವ ಅಬ್ಯಾಸ ಹೊಂದಿದ್ದು ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು. ಅ.22 ರಂದು ಹೆಬ್ರಿ ಪೇಟೆಗೆ ಹೋಗಿ ಮದ್ಯಪಾನ ಮಾಡಿ ಬಂದು ಮನೆಯಲ್ಲಿ ಬಟ್ಟೆ ಬದಲಾಯಿಸಿ ತೋಟದ ಕಡೆ ಹೋದವರು ಸಂಜೆಯಾದರೂ ಮನೆಗೆ ಬಾರದೆ ಇದ್ದಾಗ ಮನೆಯ ಅಕ್ಕ ಪಕ್ಕ ಹುಡುಕಾಡಿದಾಗ ಮನೆಯ ಹತ್ತಿರದ ಕೆರೆ ಬದಿಯಲ್ಲಿ ಅವರ ಬಟ್ಟೆಗಳು ಮತ್ತು ಕೀಟನಾಶಕದ ಬಾಟಲಿಗಳು ಇರುವುದು ಕಂಡುಬAದಿತ್ತು.
ನAತರ ಕೆರೆಯಲ್ಲಿ ಹುಡುಕಾಡಿದಾಗ ರಾತ್ರಿ 09.15 ರ ವೇಳೆಗೆ ಶಿವರಾಮ ರವರ ಮೃತದೇಹ ಪತ್ತೆಯಾಗಿದ್ದು, ಶಿವರಾಮ ರವರು ವೀಪರಿತ ಕುಡಿತದ ಅಬ್ಯಾಸ ಹೊಂದಿದ್ದು ಇದೇ ಕಾರಣದಿಂದ ಮಾನಸಿಕವಾಗಿ ಮನನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ವಿಷ ಸೇವಿಸಿ ಕೇರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆAದು ಶಂಕಿಸಲಾಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.