ಹೆಬ್ರಿ: ಮದ್ಯಪಾನ ಮಾಡಲು ಅಡ್ಡಿಪಡಿಸಿದರೆಂಬ ಕಾರಣಕ್ಕೆ ಯುವಕನೊಬ್ಬ ತನ್ನ ಮನೆಯವರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಹೆಬ್ರಿ ತಾಲೂಕಿನ ಶಿವಪುರದಲ್ಲಿ ಗುರುವಾರ ನಡೆದಿದೆ.
ಶಿವಪುರದ ಶೇಖರ ಎಂಬವರ ಪುತ್ರ ಪ್ರಸಾದ ಎಂಬಾತ ಅ. 31 (ಗುರುವಾರ) ರಂದು ಸಂಜೆ ಮದ್ಯಪಾನ ಮಾಡಲು ಹೊರಗೆ ಹೋಗುವುದಾಗಿ ತಿಳಿಸಿದಾಗ ಮನೆಯವರು ಎಲ್ಲಿಯೂ ಹೋಗುವುದು ಬೇಡ ಮನೆಯಲ್ಲೆ ಇರು ಎಂದು ಹೇಳಿದ್ದರು. ಇದೇ ವಿಚಾರಕ್ಕೆ ಕೋಪಗೊಂಡ ಪ್ರಸಾದ್, ಶೇಖರ ಮತ್ತು ಅವರ ಪತ್ನಿ ವಸಂತಿ ಅವರಿಗೆ ಕತ್ತಿ ಚೂರಿ,ದೊಣ್ಣೆ ಹಾಗೂ ಕೊಡಪಾನದಿಂದ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ಸೊಸೆ ಇಂಪಲಾ ರವರಿಗೂ ಚೂರಿಯಿಂದ ಗಾಯಗೊಳಿಸಿದ್ದಾನೆ ಎಂದು ಶೇಖರ ಹೆಬ್ರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.