ಹೆಬ್ರಿ: ಮುನಿಯಾಲು ಮಹೇಶ್ವರ ಕ್ಯಾಶ್ಯೂಸ್ ಮಾಲಕ ಉದ್ಯಮಿ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಗೋಪಿನಾಥ್ ಭಟ್ ಅವರ ತಂದೆ ಮುನಿಯಾಲು ವಾಸುದೇವ ಭಟ್(87) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಮಂಗಳೂರಿನಲ್ಲಿ ನಿಧನರಾದರು.
ವಯೋಸಹಜ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮುನಿಯಾಲಿನಲ್ಲಿ 1970ರಿಂದ ತನ್ನದೇ ಅಂಗಡಿ ಹಾಗೂ ಅಂಬಾಸಿಡರ್ ಕಾರಿನಲ್ಲಿ ಬಾಡಿಗೆ ಮಾಡುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸಹಿತ ಬಂಧುವರ್ಗವನ್ನು ಅಗಲಿದ್ದಾರೆ.