ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ಕಳ್ತೂರು ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿದ ಖದೀಮರು ಸಾವಿರಾರು ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಕಳ್ತೂರಿನ ಚಂದ್ರಶೇಖರ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿರುವ ಚಂದ್ರಶೇಖರ್ ಅವರ ಪತ್ನಿ ಮತ್ತು ಮಗಳು ಮೇ.8 8ರಂದು ಕಳ್ತೂರಿನ ತಮ್ಮ ಮನೆಗೆ ಬೀಗ ಹಾಕಿ ಹೋಗಿದ್ದರು. ಆ ಬಳಿಕ ಮೇ.25 ರಂದು ಚಂದ್ರಶೇಖರ್ ಅವರ ಮಗ ಮತ್ತು ಮಾವ ಹೋಗಿ ಮನೆಯನ್ನು ಸ್ವಚ್ಛಗೊಳಿಸಿ ಬಂದಿದ್ದರು. ಆ ನಂತರ ಮೇ.27 ರಂದು ಚಂದ್ರಶೇಖರ್ ಅವರು ಪತ್ನಿ ಮಕ್ಕಳೊಂದಿಗೆ ಕಳ್ತೂರಿನ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಅಡುಗೆ ಮನೆ ಗೋಡೆಯಲ್ಲಿ ವೆಂಟಿಲೇಟರ್ ಅಳವಡಿಸಲು ಮರದ ಹಲೆಗೆ ಹಾಕಿ ಬಿಟ್ಟಿದ್ದ ಕಂಡಿಯ ಮೂಲಕ ಒಳಗೆ ಪ್ರವೇಶಿಸಿ ಮನೆಯ ಮಲಗುವ ಕೊಣೆಯ ಮರದ ಕಪಾಟಿನಲ್ಲಿದ್ದ 60,000 ರೂ. ಮೌಲ್ಯದ ಚಿನ್ನದ ಬಳೆಗಳು -2 ಉಂಗುರ -1 ಮತ್ತು ಚಿನ್ನದ ಪಾಟಿ 2 ನ್ನು ಹಾಗೂ ಇನ್ನೊಂದು ಡ್ರಾವರ್‌ನಿಂದ 20,000/- ನಗದು ಮತ್ತು ಒಂದು 5,000 ರೂ. ಮೌಲ್ಯದ ವಾಚ್ ಮತ್ತು ಹಾಗೂ ಬ್ಯಾಗ್‌ನಲ್ಲಿದ್ದ 4,000/- ಮೌಲ್ಯದ ಬೆಳ್ಳಿಯ ಕಾಲು ಚೈನ್ ಹಾಗೂ ನೇವಲ ಮತ್ತು ದೇವರ ಕೋಣೆಯಲ್ಲಿದ್ದ 32,000 ರೂ. ಮೌಲ್ಯದ 1 ಬೆಳ್ಳಿಯ ಚೊಂಬು, 2 ಬೆಳ್ಳಿಯ ದೊಡ್ಡ ದೀಪ ಹಾಗೂ 3 ಬೆಳ್ಳಿಯ ಸಣ್ಣ ದೀಪಗಳನ್ನು ದರೋಡೆಗೈದಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.