
ಹೆಬ್ರಿ,ಮಾ.18: ಆಟೋ ರಿಕ್ಷಾ ಕ್ಕೆ ಓಮಿನಿ ಕಾರು ಡಿಕ್ಕಿಯಾಗಿ ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ಹೆಬ್ರಿಯಲ್ಲಿ ಮಾ.16 ರಂದು ನಡೆದಿದೆ.
ಗುಂಡು ನಾಯ್ಕ ಎಂಬವರು ತನ್ನ ಆಟೋದಲ್ಲಿ ಹೆಬ್ರಿಯಿಂದ ಸೀತಾನದಿ ಕಡೆಗೆ ಹೋಗುತ್ತಿದ್ದಾಗ ಕೈಕಂಬ ಜಂಕ್ಷನ್ ಬಳಿ ಬಚ್ಚಪ್ಪು ಕಡೆಯಿಂದ ಬಂದ ಓಮಿನಿ ಕಾರು ರಿಕ್ಷಾ ದ ಹಿಂಬದಿಗೆ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಚಾಲಕ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















.
.
.
.
.
.
.
.
.
.
