ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆ ಹೊಟೇಲೊಂದರಲ್ಲಿ ಗಲಾಟೆ ತಡೆಯಲು ಹೋದ ವೇಳೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರತಿದೂರು ದಾಖಲಾಗಿದ್ದು, ಸದಾನಂದ ,ಶ್ರೀಕಾಂತ್, ಸಂತೋಷ್ ಎಂಬವರು ತನಗೆ ಮಾರಣಾಂತಿಕ ಹಲ್ಲೆ ನಡೆಸಿ ತಲವಾರಿನಿಂದ ಕಡಿದು ಹಾಕುವುದಾಗಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ರಾಜ ಎಂಬವರು ಪ್ರತಿದೂರು ನೀಡಿದ್ದಾರೆ.
ರಾಜ ಅವರು ಜುಲೈ 20 ರಂದು ತನ್ನ ಪರಿಚಯದ ಸದಾನಂದ ಅವರಿಗೆ ಕರೆ ಮಾಡಿ ದಾರಿಯಲ್ಲಿ ಶ್ರೀಕಾಂತ್ ಎಂಬಾತ ತನಗೆ ನಿಂದಿಸುತ್ತಿದ್ದು ಆತನಿಗೆ ಬುದ್ದಿ ವಾದ ಹೇಳುವಂತೆ ತಿಳಿಸಿದ್ದರು. ಅದೇ ದಿನ ಮದ್ಯಾಹ್ನ ಸದಾನಂದ ರಾಜ ಅವರಿಗೆ ಕರೆ ಮಾಡಿ ಕಳ್ತೂರು ಗ್ರಾಮದ ಸಿರಿಮುಡಿ ಹೋಟೆಲ್ ಗೆ ಬರುವಂತೆ ತಿಳಿಸಿದ್ದರು. ರಾಜ ಅಲ್ಲಿಗೆ ಹೋದಾಗ ಸದಾನಂದ, ಶ್ರೀಕಾಂತ ಮತ್ತು ಸಂತೋಷ್ ಎಂಬವರು ಮದ್ಯಪಾನ ಮಡಿ ಮಾಡಿ ರಾಜರ ಬಳಿ ಗಲಾಟೆ ಆರಂಭಿಸಿದ್ದರು. ಬಳಿಕ ಗಲಾಟೆ ತಾರಕಕ್ಕೇರಿ ಶ್ರೀಕಾಂತ್ ರಾಜರ ಕಾಲರ್ ಪಟ್ಟಿ ಹಿಡಿದು ಹೊಡೆದಿದ್ದು , ಸದಾನಂದ ಮರದ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಬಳಿಕ ಮೂವರೂ ಸೇರಿ ರಾಜ ಅವರನ್ನು ಹೋಟೆಲ್ ನ ಹೊರಗೆ ಎಳೆದುಕೊಂಡು ಬಂದು ಮಾರಣಾಂತಿಕ ಹಲ್ಲೆ ನಡೆಸಿ, ಪೊಲೀಸರಿಗೆ ದೂರು ನೀಡಿದಲ್ಲಿ ತಲವಾರಿನಿಂದ ಕಡಿದು ಹಾಕುವುದಾಗಿ ಜೀವ ಬೆದರಿಕೆಯೊಡ್ಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ರಾಜ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.