ಹೆಬ್ರಿ: ಹೋಟೆಲೊಂದರಲ್ಲಿ ವ್ಯಕ್ತಿಗಳಿಬ್ಬರು ಗಲಾಟೆ ಮಾಡುತ್ತಿದ್ದ ವೇಳೆ ಅದನ್ನು ತಡೆಯಲು ಹೋದ ವ್ಯಕ್ತಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿದ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ಭಾನುವಾರ ನಡೆದಿದೆ.
ಬ್ರಹ್ಮಾವರ ಗ್ರಾಮದ ಕೆಂಜೂರು ನಿವಾಸಿ ಸಂತೋಷ್ ಅವರು ಭಾನುವಾರ(ಜುಲೈ.20) ಮಧ್ಯಾಹ್ನ ಸದಾನಂದ ಎಂಬವರೊAದಿಗೆ ಸಂತೆಕಟ್ಟೆಯಲ್ಲಿರುವ ಸಿರಿಮುಡಿ ಹೆಸರಿನ ಹೋಟೆಲ್ಗೆ ಊಟಕ್ಕೆ ಹೋಗಿದ್ದರು. ಅದೇ ವೇಳೆ ಅಲ್ಲಿಗೆ ಬಂದಿದ್ದ ಶ್ರೀಕಾಂತ್ ಮತ್ತು ರಾಜೇಶ್ ಎಂಬವರು ಯಾವುದೋ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದು, ಸಂತೋಷ್ ಅವರ ಗಲಾಟೆ ತಡೆಯಲು ಹೋದಾಗ ರಾಜೇಶ್ ಎಂಬಾತ ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಸಂತೋಷ್ಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ, ಜೀವ ಬೆದರಿಕೆಯೊಡ್ಡಿದ್ದಾನೆ ದೂರು ನೀಡಿದ್ದು, ಹೆÀಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.