
ಹೆಬ್ರಿ: ಶ್ರೀ ರಾಮಮಂದಿರದಲ್ಲಿ ರಾಷ್ಟ್ರಸೇವಿಕಾ ಸಮಿತಿ ಹೆಬ್ರಿ ಮತ್ತು ಸೀತಾಮಾತಾ ಸಮಿತಿ ಹೆಬ್ರಿ ವತಿಯಿಂದ ಪ್ರಥಮ ಬಾರಿ ದೀಪಪೂಜನಾ ಕಾರ್ಯಕ್ರಮ ನಡೆಯಿತು.
ಅಮೃತಭಾರತಿ ವಿದ್ಯಾಲಯದ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಪೂಜೆಯನ್ನು ನೆರವೇರಿಸಿ ಲೋಕಕಲ್ಯಾಣ ಮತ್ತು ಮನಕ್ಲೇಶ ನಿವಾರಣೆಗಾಗಿ ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಸೇವೆಯೇ ಶ್ರೇಷ್ಠ. ಅಲ್ಲದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು, ಅಜ್ಞಾನ ಪರಿಹಾರಕ, ಇಷ್ಟಾರ್ಥ ಸಿದ್ಧಿಯನ್ನು ಪಡೆಯಲು ದೀಪ ಪೂಜೆಯಿಂದ ಸಾಧ್ಯ, ಆದ್ದರಿಂದ ಕಲಿಯುಗದಲ್ಲಿ ಮಾತೆಯರ ಸಂಘಟನಾತ್ಮಕ ಕೆಲಸದಿಂದ ಭಕ್ತವತ್ಸಲನಾದ ದೇವರ ಅನುಗ್ರಹ ಸಿದ್ಧಿಸುತ್ತದೆ. ಭಾರತ ಜಗದ್ಗುರುವಾಗಲು ಮಾತೃಶಕ್ತಿ ಒಂದೇ ಸಾಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಬ್ರಿ ರಾಷ್ಟ್ರ ಸೇವಿಕಾ ಸಮಿತಿಯ ತಾಲೂಕು ಕಾರ್ಯವಾಹಿಕೆ ಮೀನಾಕ್ಷಿ, ಸಹಕಾರ್ಯವಾಹಿಕೆ ವಸುಧಾ ನಾಯಕ್ , ಹಿರಿಯರಾದ ಬಾಲಕೃಷ್ಣ ಮಲ್ಯ, ಸುಧೀರ್ ನಾಯಕ್, ಡಾ.ಭಾರ್ಗವಿ ಐತಾಳ್ ಮತ್ತು ಸೀತಾ ಮಾತಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

