ಹೆಬ್ರಿ: ರಾಜಸ್ಥಾನ ಮೂಲದ ಕಂಪೆನಿಯೊAದು ಹೆಬ್ರಿಯ ಗೇರುಬೀಜ ಕಾರ್ಖಾನೆಯಿಂದ ಲಕ್ಷಾಂತರ ರೂ. ಮೌಲ್ಯದ ಗೋಡಂಬಿ ತಿರುಳನ್ನು ಪಡೆದುಕೊಂಡು ಹಣ ನೀಡದೇ ವಂಚನೆ ಎಸಗಿರುವ ಪ್ರಕರಣ ನಡೆದಿದೆ.
ಮುದ್ರಾಡಿ ನ್ಯೂ ರಾಮನಾಥ್ ಕ್ಯಾಶ್ಯೂ ಇಂಡಸ್ಟ್ರಿಸ್ ನಿಂದ ರಾಜಸ್ಥಾನ ಮೂಲದ ಮನ್ನತ್ ಓವರ್ ಸೀಸ್ ಕಂಪೆನಿ ಹೆಸರಿನಲ್ಲಿ ರವಿ ಲಾಲ್ವಾನಿ, ಗೋಪಾಲ ಲಾಲ್ವಾನಿ, ಮೋಹನ್ ಲಾಲ್ವಾನಿ ಮತ್ತು ಕನ್ನಯ್ಯ ಲಾಲ್ವಾನಿ ಎಂಬವರು ಕ್ಯಾಶ್ಯೂ ಕರ್ನಲ್‌ಗಳನ್ನು ತಮಗೆ ಸರಬರಾಜು ಮಾಡಬೇಕಾಗಿ ಕ್ಯಾಶ್ಯೂ ಇಂಡಸ್ಟೀಸ್ ನ ಮ್ಯಾನೆಂಜಿAಗ್ ಪಾರ್ಟನರ್ ಅನಂತ ಪದ್ಮನಾಭ ಅವರನ್ನು ನಂಬಿಸಿ ವ್ಯವಹಾರ ಮಾಡುತ್ತಿದ್ದು ಮೊದ ಮೊದಲು ಗೋಡಂಬಿ ಕರ್ನಲ್ ತೆಗೆದುಕೊಂಡಿರುವುದಕ್ಕೆ ಹಣ ಪಾವತಿ ಮಾಡುತ್ತಿದ್ದರು.
ಆ ಬಳಿಕ 12/05/2023 ರಂದು ವಿವಿದ ಗ್ರೇಡ್‌ನ ರೂ. 5,82,540 ಮೌಲ್ಯದ ಗೊಡಂಬಿ ತಿರುಳನ್ನು ಅವರ ಬೇಡಿಕೆ ಮೇರೆಗೆ ಜಿ,ಎಸ್,ಟಿ ಬಿಲ್ ಮುಖಾಂತರ ಸರಬರಾಜು ಮಾಡಿದ್ದು ಆಪಾದಿತರು ಹಣವನ್ನು ನೀಡದೆ ಮೊಬೈಲ್ ಸ್ಚಿಚ್ ಆಪ್ ಮಾಡಿ ವಂಚನೆ ಎಸಗಿದ್ದಾರೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

