ಹೆಬ್ರಿ: ನಾಡ್ಪಾಲು ಗ್ರಾಮದ ಸೋಮೇಶ್ವರದ ಕೆಳ ಅರಸಿನಮನೆ ಎಂಬಲ್ಲಿನ ಮೀಸಲು ಅಭಯಾರಣ್ಯದಲ್ಲಿ ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಗೆ ಅಕ್ರಮ ಕೋವಿ ಬಳಸಿದ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು,ಈ ಪ್ರಕರಣ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಸ್ಥಳೀಯರಾದ ಸುರೇಂದ್ರ, ಸೀತಾರಾಮ ಹಾಗೂ ಸತ್ಯಾನಂದ ಮೇ 18 ರಂದು ರಾತ್ರಿ ತಮ್ಮಲ್ಲಿದ್ದ ಪರವಾನಿಯಿಲ್ಲದ ಅಕ್ರಮ ಸಿಂಗಲ್ ಬ್ಯಾರಲ್ ಗನ್ ಜತೆ ಸೋಮೇಶ್ವರ ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಹೋಗಿದ್ದರು. ಈ ಮಾಹಿತಿ ಮೇರೆಗೆ ಹೆಬ್ರಿ ಅರಣ್ಯಾಧಿಕಾರಿಗಳ ತಂಡ ಆರೋಪಿಗಳ ಮೇಲೆ ದಾಳಿ ನಡೆಸಿ ಆರೋಪಿಗಳಾದ ಸುರೇಂದ್ರ ಹಾಗೂ ಸೀತಾರಾಮ ಎಂಬವರನ್ನು ಬಂಧಿಸಿದ್ದು ಬಂಧಿತರಿಂದ ನಾಡ ಕೋವಿ,ಗುಂಡುಗಳು ಹಾಗೂ ಹೆಡ್ ಲೈಟ್ ವಶಕ್ಕೆ ಪಡೆದುಕೊಂಡಿದ್ದು,ಈ ದಾಳಿ ವೇಳೆ ಇನ್ನೋರ್ವ ಆರೋಪಿ ಸತ್ಯಾನಂದ ಪರಾರಿಯಾಗಿದ್ದಾನೆ.
ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಈ ಪ್ರಕರಣವನ್ನು ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿದ್ದು, ಹೆಬ್ರಿ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ