
ಹೆಬ್ರಿ,ಏ.08: ನೀರಿನ ಟ್ಯಾಂಕ್ ಇಣುಕಿ ನೋಡಲು ಹೋದ ವ್ಯಕ್ತಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಹೆಬ್ರಿಯ ಇಂದಿರಾನಗರದಲ್ಲಿ ಮಂಗಳವಾರ (ಏ.7) ನಡೆದಿದೆ.
ಇಂದಿರಾನಗರದ ಶೇಖರ ನಾಯ್ಕ್ (57ವ) ಎಂಬವರು ಮನೆಯ ತಾರಸಿಯ ಮೇಲಿದ್ದ ಟ್ಯಾಂಕ್‌ನಲ್ಲಿ ನೀರು ಇರುವುದನ್ನು ಇಣುಕಿ ನೋಡಲು ಹೋದಾಗ ಅವರ ಮೊಬೈಲ್ ಟ್ಯಾಂಕ್ ಒಳಗೆ ಬಿದ್ದಿತ್ತು. ಶೇಖರ ಅವರು ಟ್ಯಾಂಕ್‌ನಲ್ಲಿ ಬಾಗಿ ಮೊಬೈಲ್ ತೆಗೆಯುತ್ತಿದ್ದ ವೇಳೆ ಮಗುಚಿ ಬಿದ್ದು ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿದ್ದರು. ಅಸ್ವಸ್ಥಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.
ಈ ಕರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















.
.
.
.
.
.
.
.
.
.
