ಹೆಬ್ರಿ: ಲಾರಿಗೆ ಸರಕು ಲೋಡಿಂಗ್ ಮಾಡಿ ಟಾರ್ಪಾಲು ಎಳೆಯುವ ವೇಳೆ ಕಾರ್ಮಿಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿ ಸಮೀಪದ ಕಳ್ತೂರು ಸಂತೆಕಟ್ಟೆಯಲ್ಲಿ ಕಳೆದ ಮಾ 26 ರಂದು ಸಂಭವಿಸಿದೆ. ಗದಗ ಮೂಲದ ನಿವಾಸಿ ಜೀವನ್ ಸಾಬ್ ಎಂಬವರು ಗಾಯಗೊಂಡ ಕಾರ್ಮಿಕ. ಅವರು ಆಸಿಫ್ ಎಂಬವರ ಲಾರಿಯಲ್ಲಿ ಲೋಡಿಂಗ್ ಮತ್ತು ಅನ್ ಲೊಡಿಂಗ್ ಕೂಲಿ ಕೆಲಸವನ್ನು ಮಾಡಿಕೊಂಡಿದ್ದರು.
ಕಳೆದ ಮಾ26 ರಂದು ಜೀವನ್ ಸಾಬ್ ಮತ್ತು ಕಲ್ಮೇಶ್ ಎಂಬವರು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು 38 ನೇ ಕಳ್ತೂರು ಗ್ರಾಮದ ಸಂತೆಕಟ್ಟೆ ಎಂಬಲ್ಲಿರುವ ವಾಸುಕಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಮಧ್ಯಾಹ್ನ 12:30ರ ವೇಳೆಗೆ ಲಾರಿಗೆ ಹಿಂಡಿಯನ್ನು ಲೋಡ್ ಮಾಡಿ ಟಾರ್ಪಲ್ ನ್ನು ಎಳೆಯುವಾಗ ಜೀವನ್ ಸಾಬ್ ರವರು ಲಾರಿಯಿಂದ ಕೆಳಗೆ ಬಿದ್ದು ಹಣೆಗೆ ಹಾಗೂ ಸೊಂಟಕ್ಕೆ ಗಂಭೀರ ಗಾಯಗಳಾಗಿವೆ.ಈ ಘಟನೆಗೆ ಲಾರಿ ಮಾಲೀಕ ಆಸೀಫ್ ಎಂಬಾತನ ನಿರ್ಲಕ್ಷ್ಯ ಕಾರಣವೆಂದು ಜೀವನ್ ಸಾಬ್ ಪತ್ನಿ ಝಬೀನಾ ಬಾನು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.