ಹೆಬ್ರಿ: ಹೆಬ್ರಿಯ ಹೋಂ ಸ್ಟೇ ಒಂದರ ತೋಟದಲ್ಲಿ ಮಲಗಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಮಲಗಿದ್ದಲ್ಲಿಯೇ ಮೃತಪಟ್ಟಿರುವ ಘಟನೆ ಹೆಬ್ರಿಯಲ್ಲಿ ಡಿ.8 ರಂದು ನಡೆದಿದೆ.
ಆದಿತ್ಯಾ ಕೆ ಟಿ ಎಂಬವರು ಹೆಬ್ರಿ ಇಕ್ಕೋಡ್ಲು ಹೋಂ ಸ್ಟೇ ನಲ್ಲಿ ಸುಪರವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು ಡಿ. 7 ರಂದು ಸಂಜೆ ಹೋಂ ಸ್ಟೇ ಗೆ ಬರುವ ದಾರಿಯಲ್ಲಿ ಸುಮಾರು 35-45ರ ವಯಸ್ಸಿನ ಅಪರಿಚಿತ ವ್ಯಕ್ತಿ ವಿಪರೀತ ಮದ್ಯಪಾನ ಮಾಡಿದ್ದು ಆತನಿಗೆ ಅಲ್ಲಿಂದ ಹೋಗುವಂತೆ ತಿಳಿಸಿದರೂ ಆತನು ಹೋಗದೇ ಅಲ್ಲೇ ಇದ್ದು ರಾತ್ರಿ ಹೋಂ ಸ್ಟೇ ಅಡಿಕೆ ತೋಟದ ಬಳಿ ಮಲಗಿದ್ದ.
ಮರುದಿನ (ಡಿ.08) ಬೆಳಿಗ್ಗೆ ಹಾಲು ತರಲು ಹೋಗುವಾಗ ಅದೇ ವ್ಯಕ್ತಿ ಅಲ್ಲೇ ಮಲಗಿದ್ದು ಸಂಶಯಗೊAಡು ಹತ್ತಿರ ಹೋಗಿ ನೋಡಿದಾಗ ಆತ ಮೃತಪಟ್ಟಿದ್ದು ವಿಪರೀತ ಮದ್ಯಪಾನ ಮಾಡಿ ಅಥವಾ ಇನ್ನಾವೊದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.