ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ 2023ರಲ್ಲಿ ನಡೆಸಲಾದ ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್’ಮೆಂಟ್ (ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ) ವಿಭಾಗದಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಹೆಬ್ರಿಯ ಶರಣ್ ಕುಮಾರ್ ದೇವಾಡಿಗ ಅವರು ಸಂಚಿತ ವರ್ಗಾಂಶ ಸರಾಸರಿ 7.10 ಹಾಗೂ A+ ಶ್ರೇಣಿ ಪಡೆದು ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇವರಿಗೆ ಜೂ. 15 ರಂದು ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ವಿ.ವಿ ಯ 42ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಿದರು.
ಶರಣ್ ಕುಮಾರ್ ಅವರು ಹೆಬ್ರಿಯ ದೇವಸ್ಥಾನ ಬೆಟ್ಟು ಪದ್ಮನಾಭ ದೇವಾಡಿಗ ಹಾಗೂ ಸುಗಂಧಿ ದಂಪತಿ ಪುತ್ರರಾಗಿದ್ದಾರೆ.
ತೀರಾ ಬಡತನದ ನಡುವೆಯೂ ಅತ್ಯದ್ಭುತ ಸಾಧನೆ ಮಾಡಿದ ಶರಣ್ ಕುಮಾರ್ ಅವರು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.











