Share this news

ಬೆಂಗಳೂರು, ಸೆ.25: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಸೆ.22 ರಿಂದ ಆರಂಭವಾಗಿದ್ದು, ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಶ್ನಿಸಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಸಲಾಗಿತ್ತು. ಹೈಕೋರ್ಟ್ ವಿಭಾಗಿಯ ಪೀಠವು ಅರ್ಜಿಗಳ ಸುಧೀರ್ಘ ವಿಚಾರಣೆ ನಡೆಸಿ, ಜನರ ದತ್ತಾಂಶಗಳ ಗೌಪ್ಯತೆ ಕಾಪಾಡುವ ಹಾಗೂ ಕೆಲವು ಷರತ್ತು ವಿಧಿಸಿ ಜಾತಿಗಣತಿ ಸಮೀಕ್ಷೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿ ಮಧ್ಯಂತರ ಆದೇಶ ಹೊರಡಿಸಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ 2ನೇ ವಾರಕ್ಕೆ ಮುಂದೂಡಿದೆ.

ಆಯೋಗದ ಪರವಾಗಿ ರವಿವರ್ಮಕುಮಾರ್ ಅವರು ವಾದ ಆರಂಭಿಸಿದರು. 5 ನಿಮಿಷವಾದ ಮಂಡಿಸಲು ಅವಕಾಶ ನೀಡುವಂತೆ ಕೋರ್ಟಿಗೆ ಮನವಿ ಮಾಡಿದರು. ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧರಿಸಿ ವಾದ ಮಂಡನೆ ಮಾಡಿದರು. ಆಯೋಗದ ಸರ್ವೆಯ ವಿಧಾನವನ್ನು ಮರು ಪರಿಶೀಲಿಸಿದ್ದೇವೆ. ಸರ್ವೆ ವೇಳೆ ಮಾಹಿತಿ ನೀಡುವ ಬಲವಂತವಿಲ್ಲ. ಮನೆ ಬೀಗ ಹಾಕಿದ್ದರೆ, ಮನೆಯಲ್ಲಿ ಯಾರೂ ಇಲ್ಲದಿದ್ದರೆ, ಕುಟುಂಬದವರು ಸರ್ವೆಯಲ್ಲಿ ಭಾಗವಹಿಸಲು ಬಯಸಿದಿದ್ದರೆ, ಹೀಗೆ ಸರ್ವೇ ಮಾಡುವವರಿಗೆ ಆಯ್ಕೆಗಳನ್ನು ನೀಡಲಾಗಿದೆ ಮಾಹಿತಿ ನೀಡುವುದಿಲ್ಲವೆಂದು ಜನರು ಹೇಳಲು ಅವಕಾಶವಿದೆ, ಆಧಾರ್ ನಲ್ಲಿನ ದತ್ತಾಂಶ ಪಡೆಯುತ್ತಿಲ್ಲ. ಕೇವಲ ಗುರುತಿಗಷ್ಟೇ ಪಡೆಯುತ್ತೇವೆ ಎಂದು ರವಿವರ್ಮಕುಮಾರ್ ವಾದಿಸಿದರು.

ಆಯೋಗದ ವಾದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಆರಂಭಿಸಿದರು. ಸರ್ವೆಯಲ್ಲಿ ಭಾಗವಹಿಸಬೇಕಿದ್ದರೆ, ಕೇಂದ್ರ ರಾಜ್ಯ ಸರ್ಕಾರ ಪ್ರತ್ಯೇಕ ಗಣತಿ ಮಾಡುತ್ತಿದ್ದಾರೆ. ಸರ್ವೆ ಹೆಸರಿನಲ್ಲಿ ಜನಗಣತಿ ಮಾಡುತ್ತಿದ್ದಾರೆ ಎಂದು ವಾದಿಸಿದರು.
ಈ ಸಂದರ್ಭದಲ್ಲಿ ಅರ್ಜಿದಾರರ ಪರವಾಗಿ ವಕೀಲ ವಿವೇಕ್ ರೆಡ್ಡಿ ವಾದ ಆರಂಭಿಸಿದರು. ಸರ್ಕಾರದ ನಿಲುವಿನಲ್ಲಿ ಅಲ್ಪ ಬದಲಾವಣೆಯಿಂದ ಪ್ರಯೋಜನವಿಲ್ಲ. ಸಂಗ್ರಹ ಮಾಡುವಾಗ ದತ್ತಾಂಶ ಸೋರಿಕೆ ಆಗುವ ಸಾಧ್ಯತೆ ಇದೆ. ದತ್ತಾಂಶಕ್ಕೆ ಯಾವ ಕಾನೂನಿನ ರಕ್ಷಣೆ ಇದೆ ಎಂಬುವುದು ಸ್ಪಷ್ಟವಿಲ್ಲ. ಆಧಾರ್‌ಗೆ ಕಾಯ್ದೆಯ ರಕ್ಷಣೆ ಇದೆ ಆದರೆ ಇಲ್ಲಿಲ್ಲ. ಆಧಾರಿಗಿಂತ ಹೆಚ್ಚಿನ ವಿವರವನ್ನು ಇಲ್ಲಿ ನೀಡುತ್ತಿದ್ದೇವೆ. ಹಣ ಆಸ್ತಿ ಜಾತಿ ಎಲ್ಲದರ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಆದರೆ ಆಧಾರ್ ಕಾರ್ಡ್ ಕಾಯ್ದೆಗೆ ಇರುವ ರಕ್ಷಣೆ ಜಾತಿ ಸರ್ವೆಗೆ ಇಲ್ಲ. ಇಲ್ಲಿ ಖಾಸಗಿತನದ ಹಕ್ಕಿನ ರಕ್ಷಣೆಯ ಪ್ರಶ್ನೆ ಉದ್ಭವಿಸುತ್ತದೆ ಎಂದು ವಿವೇಕ್ ರೆಡ್ಡಿ ವಾದಿಸಿದರು. ಇದೆ ವೇಳೆ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಕೂಡ ವಾದಿಸಿದರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಮಾಹಿತಿ ರಕ್ಷಣೆ ಕಡ್ಡಾಯವಾಗಿದೆ ಸೂಕ್ಷ್ಮ ಮತ್ತು ವೈಯಕ್ತಿಕ ದತ್ತಾಂಶ ರಕ್ಷಣೆಗೆ ನೀತಿರೂಪಿಸಬೇಕು. ಸಮೀಕ್ಷೆ ವೇಳೆ ಸಂಗ್ರಹಿಸಿದ ತಂಶ ಎಲ್ಲಿ ಸಂಗ್ರಹಿಸುತ್ತಾರೆ? ಹ್ಯಾಕಿಂಗ್ ನಿಂದ ದತ್ತಾಂಶ ರಕ್ಷಣೆಗೆ ಯಾವ ಕ್ರಮ ಕೈಗೊಂಡಿದ್ದಾರೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಕೂಡ ರಾಜ್ಯ ಸರ್ಕಾರ ನೀಡಿಲ್ಲ ಎಂದು ವಾದಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದ್ದು, ಕೆಲವೊಂದು ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸಿದೆ.

ನ್ಯಾಯಪೀಠದ ಷರತ್ತುಗಳೇನು?

1) ದತ್ತಾಂಶವನ್ನು ಸರ್ಕಾರ ಸೇರಿ ಯಾರಿಗೂ ಬಹಿರಂಗಪಡಿಸಬಾರದು.

2) ದತ್ತಾಂಶದ ಗೌಪ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗ ರಕ್ಷಿಸಬೇಕು.

3) ಜನರು ಸ್ವಯಂ ಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು.

4) ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.

5) ಮಾಹಿತಿ ನೀಡುವಂತೆ ಜನರಿಗೆ ಯಾವುದೇ ಒತ್ತಡ ಹಾಕಬಾರದು.

6) ಆಯೋಗ ಹೊರತುಪಡಿಸಿ ಬೇರೆ ಯಾರಿಗೂ ದತ್ತಾಂಶ ಸಿಗುವಂತಿಲ್ಲ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *