ಕಾರ್ಕಳ: ಶಾಲೆಯೊಂದರ ಬೀಗ ಮುರಿದು ಕಛೇರಿಯ ಒಳಗಿದ್ದ ನಗದು ಹಾಗೂ ಡಿವಿಆರ್ ಅನ್ನು ಕಳವುಗೈದಿರುವ ಘಟನೆ ಹಿರ್ಗಾನದಲ್ಲಿ ಮಾ.4 ರಂದು ರಾತ್ರಿ ನಡೆದಿದೆ.
ಹಿರ್ಗಾನದ ಸಂತ ಮರಿಯ ಗೊರಟ್ಟಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಾ.4 ರಂದು ಸಂಜೆ ಮುಖ್ಯೋಪಾಧ್ಯಾಯರು ಶಾಲೆಯ ಕಚೇರಿಗೆ ಬೀಗ ಹಾಕಿ ಹೋಗಿದ್ದು, ಮರುದಿನ ಬಂದು ನೋಡಿದಾಗ ಕಳ್ಳರು ಕಚೇರಿಯ ಬೀಗವನ್ನು ಮುರಿದು ಕಪಾಟಿನಲ್ಲಿದ್ದ 60,000/- ರೂ. ನಗದು ಹಾಗೂ ರೂ. 5,000/- ಮೌಲ್ಯದ ಸಿಸಿ ಕ್ಯಾಮೆರಾದ ಡಿವಿಆರ್ ನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

K