Share this news

ಕಾರ್ಕಳ: ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಹಿರ್ಗಾನದ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಿರ್ಗಾನದ ಕೀರ್ತನಾ ಅವರಿಗೆ ಜೂ.27 ರಂದು ಟೆಲಿಗ್ರಾಂ ಖಾತೆಯಿಂದ @Nithya_ reception nist_ NSE99 ಲಿಂಕ್ ಬಂದಿದ್ದು, ಆ ಲಿಂಕ್ ಒಪನ್ ಮಾಡಿದಾಗ ಅದರಲ್ಲಿ ಪಾರ್ಟ ಟೈಂ ಜಾಬ್ ಎಂದು ಬಂದಿತ್ತು. ಅದರಲ್ಲಿ ಟಾಸ್ಕ್ ನೀಡಿದ್ದು, 1000 ರೂ. ಹಣವನ್ನು ವರ್ಗಾವಣೆ ಮಾಡುವಂತೆ ತಿಳಿಸಿದ್ದರು. ಅದರಂತೆ ಕೀರ್ತನಾ ಅವರು ವರ್ಗಾವಣೆ ಮಾಡಿದಾಗ ಅದಕ್ಕೆ ಲಾಭಾಂಶವಾಗಿ 3000 ರೂ. ಗಳನ್ನು ನೀಡಿದ್ದರು. ಆ ಬಳಿಕ ಇನ್ನೂ ಹೆಚ್ಚಿನ ಹಣ ಹಾಕುವಂತೆ ತಿಳಿಸಿದ್ದು ಕಿರ್ತನಾ ಅವರು ಜೂ.27 ರಂದು 70,000 ಹಾಗೂ 28 ರಂದು 75,000 ಒಟ್ಟು 1,45,000 ರೂ. ಹಣವನ್ನು Nithya ponnumani  ಎಂಬ ಹೆಸರಿನ ಖಾತೆಗೆ Scanr   ಮುಖಾಂತರ  Scan   ಮಾಡಿದ್ದಾರೆ.
ಆದರೆ ಆ ಬಳಿಕ ಲಾಭಾಂಶ ಅಲ್ಲದೇ ವರ್ಗಾವಣೆ ಮಾಡಿದ ಹಣವನ್ನೂ ನೀಡದೇ ವಂಚನೆ ಎಸಗಿದ್ದಾರೆ ಎಂದು ಕೀರ್ತನಾ ದೂರು ನೀಡಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *