Share this news

ಕಾರ್ಕಳ: ಪುರಸಭಾ ಸದಸ್ಯನೋರ್ವ ವ್ಯಕ್ತಿಯೊಬ್ಬರ ಮೇಲೆ ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆಗೈದ ಘಟನೆ ಕಾರ್ಕಳದಲ್ಲಿ ಭಾನುವಾರ ನಡೆದಿದೆ. ಈ ಹಲ್ಲೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಾರ್ಕಳ ಪುರಸಭೆಯ ಕಾಂಗ್ರೆಸ್ ಸದಸ್ಯ ಸೀತಾರಾಮ ಎಂಬವರು ಬಂಡೀಮಠದಲ್ಲಿನ ನಂದಿನಿ ಹಾಲಿನ ಬೂತ್ ಬಳಿ ನಿಟ್ಟೆ ಗ್ರಾಮದ ಮಹಾಬಲ ಮೂಲ್ಯ ಎಂಬುವರ ಬಳಿ ಅಂಗಡಿ ಕಳ್ಳತನದ ಬಗ್ಗೆ ಜಗಳವಾಡಿ, ಜೀವ ಬೆದರಿಕೆ ಹಾಕಿ ಬಳಿಕ ಅಂಗಡಿಯೊಳಗಿಂದ ಮರದ ದೊಣ್ಣೆ ತಂದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮಹಾಬಲ ರವರ ಕಾಲಿನ ಮೂಳೆ ಮುರಿದಿದ್ದು, ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಯೊಬ್ಬರು ಅಮಾಯಕನ ಮೇಲೆ ದರ್ಪ ತೋರಿರುವ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *