ಕಾರ್ಕಳ, ಸೆ02: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಹೋಟೆಲ್ ಕಾರ್ಕಳ ಇನ್ ಬಾರ್ & ರೆಸ್ಟೋರೆಂಟ್ ಸೆ.06 ರಂದು ಉದ್ಘಾಟನೆಯಾಗಲಿದೆ.
ಮಂಗಳೂರು -ಕುದುರೆಮುಖ ರಾಷ್ಟ್ರೀಯ ಹೆದ್ದಾರಿ ಹಾಗೂ ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿ ಸಂಪರ್ಕಿಸುವ ಕಾರ್ಕಳದ ಪುಲ್ಕೇರಿ ಬೈಪಾಸ್ ಜಂಕ್ಷನ್ ನಲ್ಲಿರುವ ಹೋಟೆಲ್ ಕಾರ್ಕಳ ಇನ್ ಬಾರ್ ರೆಸ್ಟೋರೆಂಟ್ ಹಾಗೂ ಅನಘ ಗ್ರಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆ ಹಾಗೂ ಖಾದ್ಯದ ಮೂಲಕ ವಿಶಾಲವಾದ ಸ್ಥಳಾವಕಾಶ ಹೊಂದಿದೆ.
ಗ್ರಾಹಕರಿಗೆ ಪ್ರತ್ಯೇಕ ಕ್ಯಾಬಿನ್, ಎಸಿ ಕ್ಯಾಬಿನ್, ಹಾಗೂ ಫ್ಯಾಮಿಲಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಕಲ್ಪಿಸಲಾಗಿದೆ.
ಶುಭ ಸಮಾರಂಭ ಹಾಗೂ ಪಾರ್ಟಿಯ ವ್ಯವಸ್ಥೆಗೆ ಪಾರ್ಟಿ ಹಾಲ್ ಹಾಗೂ ಓಪನ್ ಗಾರ್ಡನ್ ಸೌಲಭ್ಯವಿರುತ್ತದೆ. ಲಿಫ್ಟ್ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.ಇದಲ್ಲದೇ
ಕೆಳ ಅಂತಸ್ತಿನಲ್ಲಿ ಬಾರ್ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ.