ಕಾರ್ಕಳ: ಅಜೆಕಾರು ಸುತ್ತಮುತ್ತಲಿನ ಪರಿಸರದಲ್ಲಿ ಮನೆಮಾತಾಗಿರುವ ಅಜೆಕಾರು ಶ್ರೀ ಕಟೀಲ್ ವೆಜ್ ರೆಸ್ಟೋರೆಂಟ್ ನ ಎರಡನೇ ಶಾಖೆ ಅಜೆಕಾರು ಬಸ್ ನಿಲ್ದಾಣದ ಬಳಿ ಶುಕ್ರವಾರ ಶುಭಾರಂಭಗೊಂಡಿದೆ.
ಅಜೆಕಾರು ಬಸ್ ನಿಲ್ದಾಣ ಹಾಗೂ ರಿಕ್ಷಾ ತಂಗುದಾಣಕ್ಕೆ ಹೊಂದಿಕೊಂಡಿರುವ ಶ್ರೀ ಕಟೀಲ್ ಹೊಟೆಲ್ ನಲ್ಲಿ ರುಚಿಕರವಾದ ಊಟ,ಉಪಹಾರ ಜತೆಗೆ ಕುಳಿತುಕೊಳ್ಳಲು ವಿಶಾಲವಾದ ಜಾಗದ ವ್ಯವಸ್ಥೆಯಿದೆ.
ಈಗಾಗಲೇ ಅಜೆಕಾರು ಪೆಟ್ರೋಲ್ ಪಂಪ್ ಬಳಿ ಸುಸಜ್ಜಿತ ಶ್ರೀ ಕಟೀಲ್ ವೆಜ್ ರೆಸ್ಟೋರೆಂಟ್ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಶುಚಿ,ರುಚಿಯಾದ ತಿಂಡಿ ತಿನಿಸುಗಳು, ಊಟ ,ಚಾಟ್ಸ್ ಮುಂತಾದ ಸೌತ್ ಇಂಡಿಯನ್ ಶೈಲಿಯ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಇದಲ್ಲದೇ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ , ಶೌಚಾಲಯದ, ಗ್ರಾಹಕರಿಗೆ ನಗುಮೊಗದ ಸೇವೆಯಿಂದಾಗಿ ಶ್ರೀ ಕಟೀಲ್ ರೆಸ್ಟೋರೆಂಟ್ ಪ್ರವಾಸಿಗರ ಅಚ್ಚುಮೆಚ್ಚಿನ ಹೊಟೇಲ್ ಎನ್ನಿಸಿಕೊಂಡಿದೆ.
ಕೇವಲ ಹೊಟೇಲ್ ಉದ್ಯಮ ಅಲ್ಲದೇ ಇವೆಂಟ್ ಮ್ಯಾನೇಜ್ಮೆಂಟ್,ಶುಭ ಸಮಾರಂಭಗಳಿಗೆ ಬೇಕಾದ ವೆಜ್ ಹಾಗೂ ನಾನ್ ವೆಜ್ ಕ್ಯಾಟರಿಂಗ್ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ ಎಂದು ಪಾಲುದಾರರಾದ ನವೀನ್ ಶೆಟ್ಟಿ ತಿಳಿಸಿದ್ದಾರೆ.