ಕಾರ್ಕಳ: ತಾಲೂಕಿನಾದ್ಯಂತ ಸುರಿಯುತ್ತಿರುವ ಗಾಳಿ ಮಳೆಗೆ ತಾಲೂಕಿನ ಮುಡಾರು,ಎರ್ಲಪಾಡಿ ಹಾಗೂ ಇರ್ವತ್ತೂರು ಪರಿಸರದಲ್ಲಿ ಬೀಸಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಗಳು, ದನದ ಕೊಟ್ಟಿಗೆ ಕೃಷಿ ಜಮೀನಿಗೆ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ.
ಶುಕ್ರವಾರ ತಡರಾತ್ರಿ12ರ ವೇಳೆಗೆ ಬೀಸಿದ ಭಾರೀ ಬಿರುಗಾಳಿ ಸಹಿತ ಮಳೆಗೆ ಕೆಲವು ಮನೆಗಳಿಗೆ ಮರ ಉರುಳಿ ಬಿದ್ದರೆ ಇನ್ನು ಕೆಲವು ಮನೆಗಳ ಹೆಂಚು ಹಾರಿ ಹೋಗಿದ್ದು ಅಪಾರ ಹಾನಿ ಸಂಭವಿಸಿದೆ. ಅಲ್ಲದೇ ಮನೆಯೊಳಗಿದ್ದ ವಯೋವೃದ್ದ ಮಹಿಳೆ ಗಾಯಗೊಂಡಿದ್ದಾರೆ.
ಮುಡಾರು ಗ್ರಾಮದ ಕಡಾರಿ ಬಳಿಯ ವನಜ ಎಂಬವರ ಮನೆಗೆ ಹಾನಿಯಾಗಿ 75,000 ರೂ. ನಷ್ಟ, ಸಂಕಬೆಟ್ಟು ರತ್ನ ದೇವಾಡಿಗ ಎಂಬವರ ಮನೆಗೆ ಹಾನಿಯಾಗಿ 40,000 ರೂ. ನಷ್ಟ, ಕುಮೇರು ಗಿರಿಜಾ ಎಂಬವರ ಮನೆಗೆ ಹಾನಿಯಾಗಿ 15,000 ರೂ. ನಷ್ಟ, ಸಂಕಬೆಟ್ಟು ಕಮಲ ದೇವಾಡಿಗ ಎಂಬವರ ಮನೆ ಹಾನಿಯಾಗಿ 30,000 ರೂ. ನಷ್ಟ, ಸಂಕಬೆಟ್ಟು ಸುಜಾತ ಎಂಬವರ ಮನೆಗೆ ಹಾನಿಯಾಗಿ 20,000 ರೂ. ನಷ್ಟ, ಜತ್ತೊಟ್ಟು ಲಕ್ಷ್ಮೀ ಶೆಟ್ಟಿಗಾರ್ ಎಂಬವರ ಮನೆಗೆ ಹಾನಿಯಾಗಿ 25,000 ರೂ. ನಷ್ಟ, ಸಂಕಬೆಟ್ಟು ಗೌತಮ್ ಮೇಲೂರು ಅವರ 150 ಅಡಿಕೆ ಸಸಿ ಉರುಳಿದ್ದು 45,000 ರೂ. ನಷ್ಟ ಸಂಭವಿಸಿದೆ.
ಮಂಜಲ್ ಪಾದೆ ಬಳಿ ಮಾಲತಿ ಎಂಬವರ ಮನೆಗೆ ಹಾನಿಯಾಗಿ 40,000 ರೂ. ನಷ್ಟ, ವಿಜಯ ಎಂಬವರ ಮನೆಗೆ ಹಾನಿಯಾಗಿ 28,000 ರೂ. ನಷ್ಟ, ಕಡಾರಿ ಬಳಿ ಜೋಗಮ್ಮ ಎಂಬವರ 60 ಅಡಿಕೆ ಮರಗಳು ಉರುಳಿದ್ದು 25,000 ರೂ. ನಷ್ಟ ಸಂಭವಿಸಿದೆ.
ಎರ್ಲಪಾಡಿ ಗ್ರಾಮದ ಶಕೀಲಾ ಶೆಟ್ಟಿ ಎಂಬುವವರ ತೋಟದ ತೆಂಗು ಮತ್ತು ಅಡಿಕೆ ಮರಗಳು ಗಾಳಿಯಿಂದ ಬಿದ್ದಿದ್ದು, 10,000 ನಷ್ಟ,ಇರ್ವತ್ತೂರು ಸಂಜೀವಿ ಶೆಟ್ಟಿ ದನದ ಕೊಟ್ಟಿಗೆ ಹಾನಿಯಾಗಿ ಸುಮಾರು 20 ಸಾವಿರ ನಷ್ಟ ಸಂಭವಿಸಿದೆ