Share this news

ಹೆಬ್ರಿ: ಪರಸ್ತ್ರೀ ವ್ಯಾಮೋಹಕ್ಕೆ ಬಲಿಯಾಗಿ ಆಕೆಯ ಜತೆ ಅನೈತಿಕ ಸಂಬಂಧ ಇರಿಸಿಕೊಂಡ ರಸಿಕ ಪತಿಮಹಾಶಯನೋರ್ವ ಕೈ ಹಿಡಿದ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಬ್ರಿ ತಾಲೂಕಿನ ಕನ್ಯಾನ ಬನಶಂಕರಿ ಬಳಿಯ ನಿವಾಸಿ ಶಿವಪ್ರಸಾದ್ ಎಂಬಾತನ ವಿರುದ್ಧ ಆತನ ಪತ್ನಿ ಮಂಜುಳಾ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿವಪ್ರಸಾದ್ ಹೆಬ್ರಿ ಪರಿಸರದಲ್ಲಿ ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಹಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಇದಲ್ಲದೇ ಇತ್ತೀಚೆಗೆ ಒಂದು ಬಸ್ ಖರೀದಿಸಿದ್ದ. ಆರೋಪಿ ಶಿವಪ್ರಸಾದ್ ಕಳೆದ 2014ರಲ್ಲಿ ಮಂಜುಳಾ ಅವರನ್ನು ಮದುವೆಯಾಗಿದ್ದು ಈತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆ ಸಂದರ್ಭದಲ್ಲಿ ಪತ್ನಿಯ ತವರು ಮನೆಯವರು ವರದಕ್ಷಿಣೆಯಾಗಿ ಚಿನ್ನಾಭರಣಗಳನ್ನು ಹಾಗೂ ಮದುವೆಯ ಖರ್ಚು ಭರಿಸಿದ್ದರು.
ಮದುವೆಯಾದ ಬಳಿಕ ಈತ ಬಸ್ಸು ಲೀಸಿಗೆ ಪಡೆಯಲು ಎಲ್ಲಾ ಚಿನ್ನವನ್ನು ಅಡವಿರಿಸಿದ್ದು ಹಾಗೂ ವಿವಿಧ ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ. ಪತಿಯ ವ್ಯವಹಾರದ ಕುರಿತು ಪ್ರಶ್ನಿಸಿದಾಗ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಪತ್ನಿ ಮಂಜುಳಾಗೆ ಕೋಲು ಹಾಗೂ ಬೆಲ್ಟ್ ನಿಂದ ಹಲ್ಲೆ ನಡೆಸಿದ್ದ.
ಇದಲ್ಲದೇ ಈತನಿಗೆ ಪರಸ್ತ್ರೀ ಜತೆಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ಪತ್ನಿ ಮಂಜುಳಾ ಹಾಗೂ ಮಕ್ಕಳ ಜೀವನ ನಿರ್ವಹಣೆಗೆ ಹಣವನ್ನು ನೀಡದೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಮಂಜುಳಾ ಆರೋಪಿಸಿದ್ದಾರೆ.ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಗೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಪತ್ನಿ ಮಂಜುಳಾ ಹೆಬ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈತನ ವಿರುದ್ಧ ಪತ್ನಿ ದೂರು ನೀಡಿದ ಬೆನ್ನಲ್ಲೇ ಬಂಧನದ ಭಯದಿಂದ ಆರೋಪಿ ಪತಿ ಶಿವಪ್ರಸಾದ್ ನಾಪತ್ತೆಯಾಗಿದ್ದಾನೆ.ವರದಕ್ಷಿಣೆ ಕಿರುಕುಳ ಹಾಗೂ ಜೀವ ಬೆದರಿಕೆ ನೀಡಿದ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನಿಗೆ ಹುಡುಕಾಟ ನಡೆಸುತ್ತಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *