ಬೆಳ್ತಂಗಡಿ,ಆ.23 :ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ತಲೆಬುರುಡೆ ಹಿಡಿದಿಕೊಂಡು ಪೊಲೀಸರ ಮುಂದೆ ಬಂದಿದ್ದ ಮುಸುಕುಧಾರಿಯನ್ನು ಪೊಲೀಸರು ಬಂಧಿಸಿದ್ದು,ಈ ಪ್ರಕರಣಕ್ಕೆ ಸಂಬAಧಪಟ್ಟAತೆ ಎಸ್ಐಟಿ ವಿಚಾರಣೆಯ ವೇಳೆ, ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆಯೇ ಇದ್ದಾರೆ ನನಗೆ 2 ಲಕ್ಷ ಹಣ ಕೊಟ್ಟಿದ್ದಾರೆ ಎಂದು ಮುಸುಕುಧಾರಿ ಚಿನ್ನಯ್ಯ ಅಲಿಯಾಸ್ ಚೆನ್ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.ಬಂಧಿತ ಚಿನ್ನಯ್ಯನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ಎಸ್ಐಟಿ ಅಧಿಕಾರಿಗಳ ಮನವಿ ಮೇರೆಗೆ ಹೆಚ್ಚಿನ ವಿಚಾರಣೆಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳದಲ್ಲಿ ಉತ್ಖನನ ನಿಲ್ಲಿಸಿ ಮುಸುಕುಧಾರಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ನನಗೆ ಕೆಲವರು ತಲೆಬುರುಡೆ ಕೊಟ್ಟು ಧರ್ಮಸ್ಥಳದ ವಿರುದ್ಧ ಮಾತನಾಡುವಂತೆ ಹೇಳಿದ್ರು, ಬುರುಡೆ ತೆಗೆದುಕೊಂಡು ಕೋರ್ಟ್ಗೆ ಒಪ್ಪಿಸಿ ಅಂದ್ರು, ನಾನು ಒಪ್ಪಿಸಿದೆ. ಕೋರ್ಟ್ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಎಂದು ಬಂಧಿತ ಚೆನ್ನ ಹೇಳಿದ್ದಾನೆ. ಮುಸುಕುಧಾರಿಯ ಈ ಹೇಳಿಕೆಯಿಂದ ಆತ ಸುಳ್ಳಿನ ಕಂತೆಗಳು ಬಯಲಾಗಿವೆ.