ಕಲಬುರಗಿ :ನನ್ನಲ್ಲಿ ಜನಸೇವೆ ಮಾಡುವ ಶಕ್ತಿಯಿದೆ,ನಾನಿನ್ನು ಸತ್ತಿಲ್ಲ,ಕ್ಷೇತ್ರದ ಜನರ ಸೇವೆಗಾಗಿ ನನ್ನ ಜೀವನವನ್ನು ಸಮರ್ಪಿಸುತ್ತೇನೆ, ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವುಕರಾಗಿ ನುಡಿದರು.
ಅವರು ಕಲಬುರಗಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ ವೋಟ್ ಕೊಟ್ಟು ನೋಡಿ ಮುಂದಿನ 5 ವರ್ಷಗಳಲ್ಲಿ ಕಲಬುರ್ಗಿಯಲ್ಲಿ ಏನು ಬದಲಾವಣೆ ಆಗುತ್ತೆ ನೀವೇ ನೋಡಿ ಎಂದು ಜನರಲ್ಲಿ ಭರವಸೆ ಮೂಡಿಸಿದರು.
ಕಲ್ಬುರ್ಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೀಡಿದ 25 ಗ್ಯಾರಂಟಿಗಳಲ್ಲಿ ಎಲ್ಲವನ್ನೂ ಈಡೇರಿಸುತ್ತೇವೆ ಎಂದರು.
ಕಲ್ಬುರ್ಗಿಯಲ್ಲಿ ಎಲ್ಲೇ ಕೇಳಿದರೂ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ಹೇಳ್ತೀರಾ ಆದರೆ ಮತಗಟ್ಟೆಗೆ ಹೋದಾಗ ನಿಮಗೆ ಏನೂ ಅನಿಸುತ್ತೋ ಗೊತ್ತಿಲ್ಲ ಆದರೆ ನಮ್ಮನ್ನೇ ಮರೆತು ಬಿಡ್ತೀರಾ ಎಂದು ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು. ನನ್ನ ಗುರಿ ನಿಜವಾಗಿಯೂ ಕಲ್ಯಾಣ ಕರ್ನಾಟಕ ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಸ್ಥಾನಮಾನ ತಂದು ಕೊಟ್ಟಿದ್ದೇನೆ. ಈ ಮೂಲಕ ಸಂವಿಧಾನದ ಪುಸ್ತಕದಲ್ಲಿ ಕಲಬುರ್ಗಿ ಹೆಸರನ್ನು ಸೇರಿಸಿದ್ದೇನೆ. ಸೆಂಟ್ರಲ್ ವಿಶ್ವವಿದ್ಯಾಲಯ ಇಎಸ್ಐ ಆಸ್ಪತ್ರೆ ಜವಳಿ ಪಾರ್ಕ್ ರಾಷ್ಟ್ರೀಯ ಹೆದ್ದಾರಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹಲವು ಕೆಲಸ ಮಾಡಿದ್ದೇನೆ.
ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯವಾಗಿದೆ ಬಸವಣ್ಣ ಅಂಬೇಡ್ಕರ್ ತತ್ವ ಉಳಿಯಬೇಕೆನ್ನುವುದು ನನ್ನ ಗುರಿಯಾಗಿದೆ ಎಂದರು.