ಬೆಂಗಳೂರು :ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ವಿಶೇಷ ಕಾರ್ಯಪಡೆಯನ್ನು(Special Action Force) ಸ್ಥಾಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಸ್ತುತ ಕೋಮು ಸಂವೇದನೆಗಳು ಹೆಚ್ಚಾಗುತ್ತಿದ್ದು, ಸಣ್ಣ ಘಟನೆಗಳು ಸಂಭವಿಸಿದರೂ ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳಾಗಿ ತ್ವರಿತವಾಗಿ ಉಲ್ಬಣಗೊಳ್ಳುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಹಾಗೂ ಈ ಪ್ರದೇಶವು ಕೋಮು ಹತ್ಯೆಗಳು, ದ್ವೇಷ ಭಾಷಣ, ಹಿಂಸಾಚಾರ ಮುಂತಾದ ಪುನರಾವರ್ತಿತ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಕಾರಣದಿಂದ ವಿಶೇಷ ಕಾರ್ಯಪಡೆ ರಚಿಸಲಾಗಿದೆ
ಹಿಂಸಾಚಾರ,ಕೊಲೆ ಮುಂತಾದ ಪ್ರಕರಣಗಳಲ್ಲಿನ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್ ಕೂಡ ನೈತಿಕ ಪೊಲೀಸ್ ಗಿರಿ, ದ್ವೇಷ ಭಾಷಣಗಳು, ಹಿಂಸಾಚಾರ ಮುಂತಾದ ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ