Share this news

ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದಲ್ಲಿ ಇಂದು ಪದಗ್ರಹಣ ಸಮಾರಂಭ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ವೀಣೇಶ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಾಯಕತ್ವವನ್ನು ಅಳವಡಿಸಿಕೊಳ್ಳಬೇಕು. ನಾಯಕತ್ವದಿಂದ ವಿನಯ, ಸಹೃದಯತೆ, ಸೇವಾ ಮನೋಭಾವ, ಎಲ್ಲರನ್ನೂ ಸಮಾನವಾಗಿ ಕಾಣುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಉತ್ತಮ ನಾಯಕನ ಗುಣಲಕ್ಷಣಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿ ಮಾತನಾಡಿ , ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ ಉತ್ತಮವಾದ ನಾಯಕತ್ವ ಗುಣಗಳನ್ನು ರೂಪಿಸಿಕೊಂಡು ದೇಶದ ಸೇವೆಗೆ ಅಣಿಯಾಗಬೇಕೆಂದು ತಿಳಿಸಿದರು.

ಅಮೃತ ಭಾರತಿ ಟ್ರಸ್ಟಿನ ಹಿರಿಯ ಸದಸ್ಯರಾದ ಬಾಲಕೃಷ್ಣ ಮಲ್ಯ, ಪಿ ಆರ್ ಎನ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ , ಮುಖ್ಯೋಪಾಧ್ಯಾಯಿನಿಯರಾದ ಅಪರ್ಣಾ ಆಚಾರ್ , ಶಕುಂತಲಾ ಮಾತಾಜಿ ಉಪಸ್ಥಿತರಿದ್ದರು.

 ವಿದ್ಯಾರ್ಥಿನಿಯರಾದ  ನವಮಿ ಸ್ವಾಗತಿಸಿ, ಪ್ರಾಪ್ತಿ ಶೆಟ್ಟಿ ವಂದಿಸಿದರು.  ಸಾನಿಕಾ ಕಾರ್ಯಕ್ರಮ ನಿರೂಪಿಸಿದರು.ಮೋಕ್ಷ ಚುನಾಯಿತರ ಪಟ್ಟಿ ವಾಚಿಸಿದರು.

ಶಾಲಾ ನಾಯಕಿಯಾಗಿ ಲಾವಣ್ಯ ಹೆಚ್ ವಿ, ಉಪ ನಾಯಕಿಯಾಗಿ ಸಾನಿಕಾ, ವಿರೋಧ ಪಕ್ಷದ ನಾಯಕ ಸೃಜನ್ ಭಟ್ ಮತ್ತು ಸೌಂದರ್ಯ ಎಂ . ಆಯ್ಕೆಯಾಗಿದ್ದಾರೆ.

 

 

Leave a Reply

Your email address will not be published. Required fields are marked *