ಕಾರ್ಕಳ: ಜವಳಿ ವ್ಯವಹಾರದಲ್ಲಿ ಕಳೆದ ಒಂದು ದಶಕದಿಂದ ಕಾರ್ಕಳದಲ್ಲಿ ಮನೆಮಾತಾಗಿರುವ ಲಕ್ಷ್ಮೀ ಸಿಲ್ಕ್’ನ ಇನ್ನೊಂದು ಬೃಹತ್ ಜವಳಿ ಮಳಿಗೆಯು ಬಂಗ್ಲೆಗುಡ್ಡೆಯ ಸುಧರ್ಮ ಸುಧಾ ಬಿಲ್ಡಿಂಗ್ ನಲ್ಲಿ ಅ.20 ಭಾನುವಾರ ಬೆಳಗ್ಗೆ 9.45ಕ್ಕೆ ಉದ್ಘಾಟನೆಯಾಗಲಿದೆ.
ನೂತನ ಲಕ್ಷ್ಮೀ ಸಿಲ್ಕ್ ಬೃಹತ್ ಜವಳಿ ಮಳಿಗೆಯನ್ನು ಕಟಪಾಡಿ ಮಟ್ಟು ಮಹಾಕಾಳಿ ಮಂತ್ರ ದೇವತಾ ಸನ್ನಿಧಿಯ ಧರ್ಮದರ್ಶಿ ಸುಧರ್ಮ ಶ್ರೀಯಾನ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಶ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ.ಡಾ.ಜಿ ಶಂಕರ್ , ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ, ಎಸ್.ಕೆ ಎಸ್ ಇನ್ಫ್ರಾ ಪ್ರಾಜೆಕ್ಟ್ ಆಡಳಿತ ನಿರ್ದೇಶಕ ಸುಜಯ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಕೋಟ್ಯಾನ್, ಲೆಕ್ಕಪರಿಶೋಧಕ ರಮೇಶ್ ರಾವ್, ಕಾರ್ಕಳ ಕೆನರಾ ಬ್ಯಾಂಕ್ ನ ಬ್ರಾಂಚ್ ಮ್ಯಾನೇಜರ್ ಅರುಣ್ ಕುಮಾರ್, ಕಾರ್ಕಳ ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ದೇವಿಕಾ ಬಾರ್ ಅಂಡ್ ರೆಸ್ಟೋರೆಂಟ್’ನ ಮಾಲಕರಾದ ಸೀತಾರಾಮ್ ಶೆಟ್ಟಿ, ಬಜಗೋಳಿ ಮಾರುತಿ ಹಾರ್ಡ್ವೇರ್’ನ ಮಾಲಕರಾದ ಸತೀಶ್ ಜಿ. ಶೆಟ್ಟಿ, ಹೇಮಲತಾ ಪಾಟಕ್ ದುರ್ಗ, ಮುನಿಯಾಲು ಅಂಚೆ ಕಚೇರಿಯ ಅಂಚೆಪಾಲಕರಾದ ಆಶಾ ಕೋಟ್ಯಾನ್, ಕಾರ್ಕಳ ಸುರಕ್ಷಾ ಆಶ್ರಮದ ಆಯಿಷಾ, ಎಣ್ಣೆಹೊಳೆ ಆದಿಶಕ್ತಿ ದೇವಸ್ಥಾನದ ಮೊಕ್ತೇಸರರಾದ ಅಶೋಕ್ ಕುಮಾರ್, ಆಗಸ್ಟೀನ್ ಡಿಸೋಜಾ ನಕ್ರೆ, ಕುಕ್ಕುಂದೂರು ಕೋಂಕೆಮನೆ ಕೆ. ಅಪ್ರಾಯ ಕಿಣಿ ಹಾಗೂ ಕಾರ್ಕಳದ ನ್ಯಾಯವಾದಿ ಜಿ ಮುರಳಿಧರ್ ಭಟ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ನಯನ ವಿಠಲ್ ನಾಯಕ್ ,ವಿಶ್ವಾಸ್ ನಾಯಕ್ ಹಾಗೂ ಆಕಾಶ್ ನಾಯಕ್ ತಿಳಿಸಿದ್ದಾರೆ.
ಕಾರ್ಕಳದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಎನ್ನುವಂತೆ ಕುಟುಂಬದ ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಹಾಗೂ ದೈನಂದಿನ ಬಳಕೆಯ ವಸ್ತçಗಳ ವಿಫುಲ ಹಾಗೂ ಅಗಾಧ ಕಲೆಕ್ಷನ್ಸ್`ಗಳ ಬೃಹತ್ ವಸ್ತç ಭಂಡಾರವನ್ನು ಲಕ್ಷ್ಮೀ ಸಿಲ್ಕ್ ಒಳಗೊಂಡಿದೆ. ಕಾರ್ಕಳದ ಸುತ್ತಮುತ್ತಲಿನ ಗ್ರಾಹಕರಿಗೆ ಗುಣಮಟ್ಟದ ಜವಳಿಯನ್ನು ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಬೆಲೆಗಳಲ್ಲಿ ನೀಡುವ ಗುರಿಯೊಂದಿಗೆ ಲಕ್ಷ್ಮೀ ಸಿಲ್ಕ್ ಬೃಹತ್ ಜವಳಿ ಮಳಿಗೆ ಶುಭಾರಂಭವಾಗುತ್ತಿದ್ದು, ಮೂರು ಅಂತಸ್ತಿನಲ್ಲಿ ಮಹಿಳೆಯರ,ಪುರುಷರ ಹಾಗೂ ಮಕ್ಕಳ ವಸ್ತçಗಳ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿದೆ. ಪ್ರಮುಖವಾಗಿ ಮದುವೆ ಹಾಗು ಶುಭ ಸಮಾರಂಭಗಳಿಗೆ ಬೇಕಾಗುವ ಎಲ್ಲಾ ರೇಶ್ಮೇ ಸೀರೆಗಳು, ಕಾಂಜೀವರಂ ಹಾಗೂ ಬನಾರಸ್ ಸೀರೆಗಳು, ಪುರುಷರ ಹಾಗೂ ಮಕ್ಕಳ ಎಲ್ಲಾ ಡ್ರೆಸ್ ಕಲೆಕ್ಷನ್ ಗಳು ಲಕ್ಷ್ಮೀ ಸಿಲ್ಕ್ ನಲ್ಲಿ ಲಭ್ಯವಿದೆ.