Share this news

ಕಾರ್ಕಳ: ಯಾವುದೇ ಒಂದು ಉದ್ಯಮ ಅಥವಾ ಉದ್ಯಮಿ ತನ್ನ ವ್ಯವಹಾರದಲ್ಲಿ ಯಶಸ್ಸು ಕಾಣಬೇಕಾದರೆ ಜೀವನದಲ್ಲಿ ಅತ್ಯಂತ ಕಷ್ಟದ ಹಾಗೂ ಸವಾಲಿನ ದಿನಗಳನ್ನು ಎದುರಿಸಬೇಕಾಗುತ್ತದೆ.ಸವಾಲುಗಳನ್ನು ಮೆಟ್ಟಿ ಒಂದು ಸಂಸ್ಥೆ ಕಟ್ಟಿದಾಗ ಅದರಿಂದ ಸಿಗುವ ಆನಂದ ಸಾರ್ಥಕತೆಯ ಭಾವವನ್ನು ಮೂಡಿಸುತ್ತದೆ ಎಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಹೇಳಿದರು.
ಅವರು ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ಲಕ್ಷ್ಮೀ ಸಿಲ್ಕ್’ನ ಬೃಹತ್ ಜವಳಿ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಶಕದ ಹಿಂದೆ ಸಣ್ಣ ಉದ್ಯಮವಾಗಿ ಆರಂಭಗೊಂಡ ಲಕ್ಷ್ಮೀ ಸಿಲ್ಕ್ ಇಂದು ನಿರಂತರ ಪರಿಶ್ರಮದ ಫಲವಾಗಿ ಇಂದು ಕಾರ್ಕಳದಲ್ಲೇ ಅದ್ವಿತೀಯ ಎಂಬಂತೆ ಮೂರು ಮಹಡಿಗಳನ್ನೊಳಗೊಂಡ ಬೃಹತ್ ಜವಳಿ ಮಳಿಗೆಯಾಗಿ ಬೆಳೆಯುವಂತಾಗಿದೆ.ಈ ಮಟ್ಟಕ್ಕೆ ಲಕ್ಷ್ಮೀ ಸಿಲ್ಕ್ ಉದ್ಯಮ ಬೆಳೆಯಬೇಕಾದರೆ ಅದರ ಹಿಂದಿರುವ ಕಠಿಣ ಪರಿಶ್ರಮ ಹಾಗೂ ಕಷ್ಟನಷ್ಟ ಹೆಚ್ಚಿನವರಿಗೆ ತಿಳಿದಿರುವುದಿಲ್ಲ ಆದರೆ ನಯನ,ವಿಠಲ್ ನಾಯಕ್ ಹಾಗೂ ಅವರ ಮಕ್ಕಳು ತಮ್ಮ ಉದ್ಯಮವನ್ನು ತಪಸ್ಸಿನಂತೆ ಸ್ವೀಕರಿಸಿ ಸವಾಲುಗಳನ್ನು ಮೆಟ್ಟಿನಿಂತು ಉದ್ಯಮ ಕಟ್ಟಿ ಒಂದಷ್ಟು ಜನರಿಗೆ ಉದ್ಯೋಗವನ್ನು ಕೂಡ ನೀಡಿದ್ದಾರೆ,ಆದ್ದರಿಂದ ನಮ್ಮೂರಿನ ಈ ಉದ್ಯಮಕ್ಕೆ ಎಲ್ಲರೂ ಸಹಕರಿಸಿ ಅವರ ಉದ್ಯಮ ಬೆಂಬಲಿಸುವಂತೆ ಸಂಸ್ಥೆಯ ಪರವಾಗಿ ಮನವಿ ಮಾಡಿದರು.
ಕಟಪಾಡಿ ಮಟ್ಟು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಸುಧರ್ಮ ಶ್ರೀಯಾನ್ ಲಕ್ಷ್ಮೀ ಸಿಲ್ಕ್ ಉದ್ಯಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿಉಡುಪಿ ಶ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ.ಡಾ.ಜಿ ಶಂಕರ್, ಎಸ್.ಕೆ ಎಸ್ ಇನ್ಫ್ರಾ ಪ್ರಾಜೆಕ್ಟ್ ಆಡಳಿತ ನಿರ್ದೇಶಕ ಸುಜಯ ಶೆಟ್ಟಿ, ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಕೋಟ್ಯಾನ್, ಲೆಕ್ಕಪರಿಶೋಧಕ ರಮೇಶ್ ರಾವ್, ಕಾರ್ಕಳ ಕೆನರಾ ಬ್ಯಾಂಕ್ ನ ಬ್ರಾಂಚ್ ಮ್ಯಾನೇಜರ್ ಅರುಣ್ ಕುಮಾರ್, ಕಾರ್ಕಳ ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ದೇವಿಕಾ ಬಾರ್ ಅಂಡ್ ರೆಸ್ಟೋರೆಂಟ್’ನ ಮಾಲಕರಾದ ಸೀತಾರಾಮ್ ಶೆಟ್ಟಿ, ಬಜಗೋಳಿ ಮಾರುತಿ ಹಾರ್ಡ್‌ವೇರ್’ನ ಮಾಲಕರಾದ ಸತೀಶ್ ಜಿ. ಶೆಟ್ಟಿ, ಹೇಮಲತಾ ಪಾಟಕ್ ದುರ್ಗ, ಮುನಿಯಾಲು ಅಂಚೆ ಕಚೇರಿಯ ಅಂಚೆಪಾಲಕರಾದ ಆಶಾ ಕೋಟ್ಯಾನ್, ಕಾರ್ಕಳ ಸುರಕ್ಷಾ ಆಶ್ರಮದ ಆಯಿಷಾ, ಎಣ್ಣೆಹೊಳೆ ಆದಿಶಕ್ತಿ ದೇವಸ್ಥಾನದ ಮೊಕ್ತೇಸರರಾದ ಅಶೋಕ್ ಕುಮಾರ್, ಆಗಸ್ಟೀನ್ ಡಿಸೋಜಾ ನಕ್ರೆ, ಕುಕ್ಕುಂದೂರು ಕೋಂಕೆಮನೆ ಕೆ. ಅಪ್ರಾಯ ಕಿಣಿ ಹಾಗೂ ಕಾರ್ಕಳದ ನ್ಯಾಯವಾದಿ ಜಿ ಮುರಳಿಧರ್ ಭಟ್ ಮುಂತಾದವರು ಉಪಸ್ಥಿತರಿದ್ದರು. ಲಕ್ಷ್ಮೀ ಸಿಲ್ಕ್ ಮಾಲಕರಾದ ನಯನ ವಿಠಲ್ ನಾಯಕ್ ದಂಪತಿ ಹಾಗೂ ಮಕ್ಕಳಾದ ವಿಶ್ವಾಸ್ ಹಾಗೂ ಆಕಾಶ್ ಬಂದ ಅತಿಥಿ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.

 

ಚಿತ್ರ ಕೃಪೆ: ಗುರು ಸ್ಟುಡಿಯೋ,ಜೋಡುರಸ್ತೆ

 

Leave a Reply

Your email address will not be published. Required fields are marked *