Share this news

ಮಣಿಪಾಲ: ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರದಲ್ಲಿ 78ನೇ ಸ್ವಾತಂತ್ರ್ಯ  ದಿನಾಚರಣೆ ಆಚರಿಸಲಾಯಿತು.
ಮಣಿಪಾಲ್ ಗ್ರೂಪ್, ಮಣಿಪಾಲದ ಅಧ್ಯಕ್ಷರಾದ ಟಿ ಸುಧಾಕರ ಪೈ ಧ್ವಜಾರೋಹಣಗೈದು ಮಾತನಾಡಿ ಪ್ರಾಮಾಣಿಕ ಕರ್ತವ್ಯನಿಷ್ಠೆಯಿಂದ ಕಾರ್ಯಪ್ರವೃತ್ತರಾದರೆ ಭವ್ಯ ಭಾರತದ ವಿಕಾಸ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ದೇಶಸೇವೆಗೈಯುವ ಮನೋಭಾವನೆಯನ್ನು ಮೂಡಿಸಿಕೊಳ್ಳಬೇಕೆಂದು ಶುಭ ಹಾರೈಸಿದರು.

ವಿದ್ಯಾರ್ಥಿ ತನ್ಮಯೀ ಭಟ್ ಸ್ವಾತಂತ್ರ್ಯ  ದಿನಾಚರಣೆ ಕುರಿತು ಭಾಷಣ ಮಾಡಿದರು.
ಮಣಿಪಾಲ್ ಹೈ ಸ್ಕೂಲ್ ಟ್ರಸ್ಟ್ನ ಕರೆಸ್ಪೊಂಡೆAಟ್ ಪ್ರಕಾಶ್ ಶೆಟ್ಟಿ, ಎಚ್.ಪಿ.ಆರ್. ಗ್ರೂಪ್ ಆಫ್ ಇನ್ಸಿ÷್ಟಟೂಟ್‌ನ ಅಧ್ಯಕ್ಷರಾದ ಹರಿಪ್ರಸಾದ್ ರೈ, ಸಂಸ್ಥೆಯ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 


 

 

 

                        

                          

                        

                          

 

`

Leave a Reply

Your email address will not be published. Required fields are marked *