Share this news

ದುಬೈ:ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರದಲ್ಲಿ ನಡೆಸಿದ ದಾಳಿಯ ಕಹಿ ನೆನಪು ಹಸಿಯಾಗಿದೆ. ಹೀಗಿರುವಾಗಲೇ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಆಡುವ ಪರಿಸ್ಥಿತಿ ಬಂದೊದಗಿತ್ತು. ಈ ಪಂದ್ಯವನ್ನು ಕೈ ಬಿಡಬೇಕು ಎಂದು ಅನೇಕರು ಆಗ್ರಹಿಸಿದ್ದರು. ಆದರೆ, ನಾವು ಆಟ ಆಡೇ ಆಡುತ್ತೇವೆ ಎಂದು ಟೀಂ ಇಂಡಿಯಾ ದೃಢ ನಿರ್ಧಾರ ಮಾಡಿತ್ತು. ಆಟದ ವೇಳೆ ಟೀಂ ಇಂಡಿಯಾ ತೋರಿದ ಖದರ್ ಸೂಪರ್ ಆಗಿತ್ತು.
ಇಂಡಿಯಾ ಹಾಗೂ ಪಾಕಿಸ್ತಾನದ ಮ್ಯಾಚ್ ಟಾಸ್ ವೇಳೆ ಸೂರ್ಯಕುಮಾರ್ ಯಾದವ್ ಅವರು ಪಾಕ್ ನಾಯಕ ಸಲ್ಮಾನ್ ಜೊತೆ ಹ್ಯಾಂಡ್ ಶೇಕ್ ಮಾಡಲೇ ಇಲ್ಲ. ಟಾಸ್ ಮುಗಿಸಿ, ನೇರವಾಗಿ ಮರಳಿ ಬಂದರು. ಆಗಲೇ ಟೀಂ ಇಂಡಿಯಾ ತನ್ನ ನಿಲುವನ್ನು ಸ್ಪಷ್ಟವಾಗಿ ತೋರಿಸಿಯಾಗಿತ್ತು. ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬ ಒತ್ತಡದ ನಡುವೆ ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾದಾಟ ಹಲವು ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಹೆಜ್ಜೆ ಹೆಜ್ಜೆಗೂ ಪಾಕಿಸ್ತಾನಕ್ಕೆ ನಿರಾಸೆಯೇ ಆಯಿತು.

ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಹಿರಿ ಹಿರಿ ಹಿಗ್ಗಿತ್ತು. ಆದರೆ ಇಡೀ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸಮಾಧಾನ ತಂದಿತ್ತು ಟಾಸ್ ಗೆಲುವು ಮಾತ್ರ. ಇನ್ನುಳಿದ ಎಲ್ಲಾ ಹಂತದಲ್ಲೂ ಹಿನ್ನಡೆಗಳೇ ಎದುರಾಗಿತ್ತು. ಟಾಸ್ ಗೆದ್ದ ಬಳಿಕ ಹ್ಯಾಂಡ್‌ಶೇಕ್ ಮಾಡಲು ಸೂರ್ಯಕುಮಾರ್ ಯಾದವ್ ನಿರಾಕರಿಸಿದ್ದರು. ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಕಡಗಣಿಸಿದ್ದರು. ಇದಾದ ಬಳಿಕ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಪ್ರದರ್ಶನ ನೀಡಿ ಸೋಲು ಕಂಡಿತ್ತು. ಭಾರತ ಸುಲಭವಾಗಿ ಚೇಸ್ ಮಾಡಿ ಗೆಲುವು ದಾಖಲಿಸಿತ್ತು. ಪಾಕಿಸ್ತಾನ ತಂಡ ಮೈದಾನದಲ್ಲಿ ಹ್ಯಾಂಡ್‌ಶೇಕ್‌ಗಾಗಿ ಕಾಯುತ್ತಾ ನಿಂತಿತ್ತು. ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್, ಶಿವಂ ದುಬೆ ಕ್ರೀಸ್‌ನಲ್ಲೇ ಇದ್ದರೂ ಪಾಕಿಸ್ತಾನ ಕ್ರಿಕೆಟಿಗರ ಜೊತೆ ಕೈಕುಲಕಲಿಲ್ಲ. ಇತ್ತ ಟೀಂ ಇಂಡಿಯಾ ಕ್ರಿಕೆಟಿಗರು ಡಗೌಟ್‌ನಿಂದ ಪೆವಿಲಿಯನ್‌ಗೆ ತೆರಳಿದರೂ. ಯಾರೂ ಕೂಡ ಮೈದಾನಕ್ಕೆ ಬಂದು ಪಾಕಿಸ್ತಾನ ಕ್ರಿಕೆಟಿಗರ ಜೊತೆ ಹ್ಯಾಂಡ್‌ಶೇಕ್ ಮಾಡಲಿಲ್ಲ. ಪಾಕಿಸ್ತಾನ ಕ್ರಿಕೆಟಿಗರು ಕೆಲ ಹೊತ್ತು ಕಾದು ಬಳಿಕ ಮರಳಿದ್ದಾರೆ.

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ನಂತರದ ಸಂದರ್ಶನದಲ್ಲಿ , ಈ ಗೆಲುವನ್ನು ಭಾರತೀಯ ಭದ್ರತಾ ಪಡೆಗಳಿಗೆ ಅರ್ಪಿಸಿದರು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರೊಂದಿಗೆ ನಿಲ್ಲುವ ಬಗ್ಗೆಯೂ ಮಾತನಾಡಿದರು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಸೂರ್ಯ, ‘ಒಂದು ವಿಷಯ ಹೇಳಲು ಬಯಸಿದ್ದೆ. ಇದು ಸೂಕ್ತ ಅವಕಾಶ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ. ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *