Share this news

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿನ ಆಕ್ಷೇಪಾರ್ಹ ಪೋಸ್ಟ್ಗಳನ್ನು ತೆಗೆದುಹಾಕಲು ಭಾರತೀಯ ಸೇನೆಗೆ ಅಧಿಕಾರ ನೀಡಲಾಗಿದೆ.ರಕ್ಷಣಾ ಸಚಿವಾಲಯವು ಹಿರಿಯ ಸೇನಾಧಿಕಾರಿ, ಭಾರತೀಯ ಸೇನೆಯ ಕಾರ್ಯತಂತ್ರದ ಸಂವಹನದ ಹೆಚ್ಚುವರಿ ಮಹಾನಿರ್ದೇಶಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 (3) (ಬಿ) ಗೆ ಅನುಗುಣವಾಗಿ, ಭಾರತೀಯ ಸೇನೆ ಮತ್ತು ಅದರ ಘಟಕಗಳಿಗೆ ಸಂಬAಧಿಸಿದ ಕಾನೂನುಬಾಹಿರ ವಿಷಯಕ್ಕೆ ಸಂಬAಧಿಸಿದAತೆ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆಗೆದುಹಾಕುವ ವಿನಂತಿಗಳು ಸೇರಿದಂತೆ ನೋಟಿಸ್ ನೀಡಲು ಹೆಚ್ಚುವರಿ ಮಹಾನಿರ್ದೇಶಕರಿಗೆ ಅಧಿಕಾರವಿದೆ.

ಈ ಹಿಂದೆ ಸೇನೆಗೆ ಸಂಬAಧಿಸಿದ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಲು ಅಥವಾ ನಿರ್ಬಂಧಿಸಲು ಭಾರತೀಯ ಸೇನೆಯು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಅವಲಂಬಿಸಬೇಕಿತ್ತು. ಈ ಅಧಿಸೂಚನೆಯ ಮೂಲಕ ಭಾರತೀಯ ಸೇನೆಗೆ ಸಂಬAಧಿಸಿದ ಕಾನೂನುಬಾಹಿರ ವಿಷಯದ ಕುರಿತು ಮಧ್ಯವರ್ತಿಗಳಿಗೆ ನೇರವಾಗಿ ನೋಟಿಸ್ ನೀಡಲು ಸಾಧ್ಯವಾಗುತ್ತದೆ.

 

 

 

 

 

 

 

Leave a Reply

Your email address will not be published. Required fields are marked *