Share this news

ಕಾರ್ಕಳ: ಸಾಮಾನ್ಯವಾಗಿ ಎಲ್ಲರೂ ಮತದಾನ ಮಾಡಲು ಮತಗಟ್ಟೆಗೆ ವಾಹನಗಳಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಬರುತ್ತಾರೆ. ಅದರೆ ಇಲ್ಲೊಬ್ಬ ಯುವಕ ಕುದುರೆಯನ್ನೇರಿ ಬಂದು ಮತದಾನ ಮಾಡಿ ಮತದಾನದ ಜಾಗೃತಿ ಮೂಡಿಸಿದ್ದಾರೆ.
ಕಾರ್ಕಳದ ಖ್ಯಾತ ಅಂತರರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು ಅವರ ಪುತ್ರ ಏಕಲವ್ಯ ತಾನು ಸಾಕಿದ ಕುದುರೆಯನ್ನು ಏರಿ ಕಾರ್ಕಳದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬೂತ್ ನಂಬರ್ 87ರಲ್ಲಿ ಮತದಾನ ಮಾಡಿ, ಉಳಿದವರಿಗೆ ಮತದಾನಕ್ಕೆ ಪ್ರೇರೇಪಣೆ ನೀಡಿದ್ದಾರೆ.
ಯುವಕನೊಬ್ಬ ಕುದುರೆ ಏರಿ ಬಂದು ಮತದಾನ ಮಾಡುವುದರ ಕುರಿತು ಸಾರ್ವಜನಿಕರಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸಿತು.
ಕುದುರೆ ಏರಿಬಂದು ರಾಜಠೀವಿಯಲ್ಲಿ ಮತಗಟ್ಟೆ ಬಳಿ ಇಳಿದು ಮತದಾನ ಮಾಡಿ ಬಂದಾಗ ಉಳಿದ ಮತದಾರರು ಅವರೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು.
ಒಟ್ಟಿನಲ್ಲಿ ಏಕಲವ್ಯ ಪ್ರಜಾಪ್ರಭುತ್ವವೆಂಬ ಗುರುವಿಗೆ ಮತವನ್ನು ದಾನ ಮಾಡಿ ಉಳಿದವರಿಗೂ ಮಾದರಿ ಎನಿಸಿಕೊಂಡಿದ್ದಾರೆ

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *