ಬೆಂಗಳೂರು: ರಾಜ್ಯದಲ್ಲಿ ತಾರಕಕ್ಕೇರಿದ್ದ IPS vs IAS ಸಮರಕ್ಕೆ ಕೊಂಚ ವರ್ಗಾವಣೆ, ಸರ್ಕಾರದ ಖಡಕ್ ಎಚ್ಚರಿಕೆಯ ನಂತರ ಬ್ರೇಕ್ ಬಿದ್ದಿದೆ.
ಈ ನಡುವೆ ರೋಹಿಣಿ ಸಿಂಧೂರಿ, ರೂಪಾ.ಡಿ ಟಾಕ್ ವಾರ್ ಗೆ ಬ್ರೇಕ್ ಹಾಕುವುದಕ್ಕೆ ಕೋರ್ಟ್ ಮೊರೆ ಹೋಗಿದ್ದು, ನಿರ್ಬಂಧಕಾಜ್ಞೆಯನ್ನು ಕೋರಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ 74 ನೇ ಸಿವಿಲ್ ಕೋರ್ಟ್ ಐಪಿಎಸ್ ಅಧಿಕಾರಿ ಡಿ. ರೂಪಾಗೆ ನೋಟಿಸ್ ನೀಡಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು, ರೂಪಾ ಡಿ ವಿರುದ್ಧ ನಿರ್ಬಂಧಕಾಜ್ಞೆಯನ್ನು ನೀಡುವಂತೆ ಬೆಂಗಳೂರಿನ 74ನೇ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ವಿಚಾರಣೆ ನಡೆಸಿದ ಕೋರ್ಟ್ ಡಿ.ರೂಪಾಗೆ ಆಕ್ಷೇಪಣೆ ಸಲ್ಲಿಸಲು ಕಾಲವಕಾಶ ನೀಡಿದ್ದು, ಮಾರ್ಚ್ 7 ಕ್ಕೆ ವಿಚಾರಣೆ ಮುಂದೂಡಿದೆ.
ಐಪಿಎಸ್ಅಧಿಕಾರಿ ರೂಪಾ.ಡಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಟಾಕ್ ವಾರ್ ಸ್ಥಳ ತೋರಿಸದೇ ವರ್ಗಾವಣೆ ಬಳಿಕ ಬ್ರೇಕ್ ಬೀಳಲಿದೆ ಎನ್ನಲಾಗಿತ್ತು. ಆದರೆ ನಿನ್ನೆ ಮತ್ತೆ ಪೋಸ್ಟ್ ಮಾಡಿದ್ದಂತ ರೂಪಾ ಡಿ ಅವರು, ನಾನು ರೋಹಿಣಿ ಸಿಂಧೂರಿ ಬಗ್ಗೆ ಎತ್ತಿರುವ ಪ್ರಶ್ನೆಗಳ ಬಗ್ಗೆ ಮಾಧ್ಯಮದವರೇ ಗಮನಸಿ ಎಂಬುದಾಗಿ ಗುಡುಗಿದ್ದರು.
ಈ ಬೆನ್ನಲ್ಲೇ ರೋಹಿಣಿ ಸಿಂಧೂರಿ ಅವರು, ರೂಪಾ ಡಿ ವಿರುದ್ಧ ನಿರ್ಬಂಧಕಾಜ್ಞೆಯನ್ನು ನೀಡುವಂತೆ ಬೆಂಗಳೂರಿನ 74ನೇ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ನಿನ್ನೆಯೇ ರೋಹಿಣಿ ಸಿಂಧೂರಿಯವರ ಪರ ವಕೀಲರು ವಾದ ಮುಗಿಸಿದ್ದು, ಇಂದು ರೂಪಾ.ಡಿ ಪರ ವಕೀಲರು ಕೋರ್ಟ್ ಗೆ ಹಾಜರಾಗಿ ತಮ್ಮ ವಾದವನ್ನು ಮಂಡಿಸಿದ್ದಾರೆ.
ಇಬ್ಬರ ವಾದ, ಪ್ರತಿವಾದ ಮಂಡನೆಯ ಬಳಿಕ, ಇಂದು 74ನೇ ಸಿಟಿ ಸಿವಿಲ್ ಕೋರ್ಟ್ ನಿಂದ ರೋಹಿಣಿ ಸಿಂಧೂರಿ ಕೋರಿರುವಂತ ನಿರ್ಬಂಧಕಾಜ್ಞೆಯ ಸಂಬಂಧ ಕೋರ್ಟ್ ವಿಚಾರಣೆ ನಡೆಸಿದ ಕೋರ್ಟ್ ಮಾರ್ಚ್ 7 ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ.